January 16, 2026
AA-311225-death

ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಮೊಮ್ಮಗಳು, ಅಮೆರಿಕದ ಪತ್ರಕರ್ತೆ ಟಟಿಯಾನಾ ಸ್ಕ್ಲೋಸ್‌ಬರ್ಗ್(35) ಅವರು ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದಿದ್ದಾರೆ.

ಜೆಎಫ್‌ಕೆ ಲೈಬ್ರರಿ ಫೌಂಡೇಶನ್‌ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಕುಟುಂಬವು, ‘ನಮ್ಮ ಸುಂದರ ಟಟಿಯಾನಾ ಇಂದು ಬೆಳಗ್ಗೆ ನಿಧನರಾದರು. ಅವರು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾರೆ’ ಎಂದು ತಿಳಿಸಿದ್ದಾರೆ.ಟಟಿಯಾನಾ ಅವರು ಶ್ಲೋಸ್‌ಬರ್ಗ್ ವಿನ್ಯಾಸಕ ಎಡ್ವಿನ್ ಶ್ಲೋಸ್‌ಬರ್ಗ್ ಮತ್ತು ರಾಜತಾಂತ್ರಿಕ ಕ್ಯಾರೋಲಿನ್ ಕೆನಡಿ ಅವರ ಪುತ್ರಿ. ತಾವು ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿ ವರೆಗೆ ಬದುಕಿರುತ್ತೇನೆ ಎಂದು ಇತ್ತೀಚೆಗಷ್ಟೇ ಟಟಿಯಾನಾ ಹೇಳಿಕೊಂಡಿದ್ದರು. ಜೊತೆಗೆ ಕೀಮೋಥೆರಪಿ ಮತ್ತು ಮೂಳೆ ಮಜ್ಜೆಯ ಕಸಿ ಸೇರಿದಂತೆ ತಾನು ಪಡೆದ ಚಿಕಿತ್ಸೆಗಳನ್ನು ಅವರು ವಿವರಿಸಿದ್ದರು.

About The Author

Leave a Reply