January 16, 2026
WhatsApp Image 2025-12-17 at 1.08.05 PM

 ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.ಇದೀಗ ಹೊಸ ವರ್ಷದ ವೇಳೆ ಫಲಾನುಭವಿಗಳ ಖಾತೆಗೆ ಒಂದು ಕಂತಿನ ಹಣ ಬಂದಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಗೃಹಲಕ್ಷ್ಮಿ ಫಲಾನುಭವಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಹೌದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದಂತೆ ಹೊಸ ವರ್ಷಕ್ಕೆ ಯಜಮಾನಿಯರಿಗೆ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ.ಗೃಹಲಕ್ಷ್ಮಿ ಯೋಜನೆಯ 24 ನೇ ಕಂತಿನ 2000 ರೂ ಬೆಳಗಾವಿ ಜಿಲ್ಲೆಯ ಹಲವು ಮಹಿಳೆಯರ ಖಾತೆಗೆ ಜಮಾ ಆಗಿದೆ. ಆದರೆ ಬೆಳಗಾವಿ ಜಿಲ್ಲೆಯ ಹಲವು ಮಹಿಳೆಯರ ಖಾತೆಗೆ ಜಮಾ ಆಗಿದೆ. ಈ ಹಿನ್ನೆಲೆ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ ಹಣ ತಿಂಗಳಿಗೊಮ್ಮೆ ಬಿಡುಗಡೆಯಾಗಬೇಕಾಗಿದ್ದರೂ, ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದಾಗಿ ಒಂದೇ ಬಾರಿ ಎರಡು ಅಥವಾ ಮೂರು ತಿಂಗಳ ಹಣವೂ ಜಮಾ ಆಗುತ್ತಿದೆ. ಫೆಬ್ರವರಿ – ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿಲ್ಲ. ಪರಿಶೀಲಿಸಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಗೃಹಲಕ್ಷ್ಮೀ ಹಣ ಜಮೆಯಾಗದಿದ್ದರೆ ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ

ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲವೇ? ಯಾವಾಗ ಬರುವುದೋ ಎಂದು ಅಧಿಕಾರಿಗಳ ಬಳಿ ಅಲೆದು ಬೇಸತ್ತಿದ್ದೀರಾ? ಇನ್ನು ಮುಂದೆ ಯಾರ ಬಳಿಯೂ ಹೋಗಬೇಕಿಲ್ಲ. ಇದಕ್ಕಾಗಿ ಬಂದಿದೆ ಸಹಾಯವಾಣಿ! ಹೌದು, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ‘181’ ಸಂಖ್ಯೆಯ ಸಹಾಯವಾಣಿಯನ್ನು ತೆರೆದಿದ್ದು, ಇದರಡಿ ಇದೇ ಮೊದಲ ಬಾರಿಗೆ ಗೃಹಲಕ್ಷ್ಮಿಯನ್ನೂ ತರಲಾಗಿದೆ.

ಆದರೆ, ಕೆಲವೊಮ್ಮೆ ಎರಡು ತಿಂಗಳು, ಮೂರು ತಿಂಗಳಾದರೂ ಗೃಹಲಕ್ಷ್ಮಿ ಹಣ ಬಂದಿರುವುದಿಲ್ಲ. ಇಂತಹ ಸಂದರ್ಭದಲ್ಲಿಫಲಾನುಭವಿ ಮಾತ್ರವಲ್ಲದೆ, ಮನೆಯ ಬಹುತೇಕ ಸದಸ್ಯರು ಆಗಾಗ್ಗೆ ಖಾತೆ ಹಾಗೂ ಮೊಬೈಲ್‌ನಲ್ಲಿಸಂದೇಶ ಪರಿಶೀಲಿಸುತ್ತಾರೆ. ಆಗಲೂ ಸಮಾಧಾನವಾಗದೆ, ತಮ್ಮ ನೆರೆಹೊರೆಯವರನ್ನು ಕೇಳುವುದು, ಇಲ್ಲವೇ ಕಚೇರಿಗಳಿಗೆ ಭೇಟಿ ನೀಡಿ ‘ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ಲ. ಯಾವಾಗ ಬರುತ್ತದೆ’ ಎಂದು ಕೇಳಿ ವಾಪಸ್ಸಾಗುತ್ತಿರುತ್ತಾರೆ. ಇನ್ನು ಮುಂದೆ ಎಲ್ಲಿಯೂ ಹೋಗಬೇಕಿಲ್ಲ. ನಿಮ್ಮ ಮೊಬೈಲ್‌ನಿಂದಲೇ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಕೆಲವೊಮ್ಮೆ ತಾಂತ್ರಿಕ ದೋಷಗಳಿಂದಲೋ ಅಥವಾ ಇ-ಕೆವೈಸಿ ಮಾಡಿಸದಿದ್ದರೆ ಇಲ್ಲವೇ ತೆರಿಗೆ ಪಾವತಿಸುತ್ತಿದ್ದರೆ ಇಂತಹ ಸಂದರ್ಭದಲ್ಲಿಗೃಹಲಕ್ಷ್ಮಿ ಹಣ ನಿಲ್ಲಿಸಲಾಗಿರುತ್ತದೆ. ಈ ಬಗ್ಗೆ ಸಹಾಯವಾಣಿಗೆ ಕರೆ ಮಾಡುವ ಮೂಲಕ ನಿಖರವಾದ ಮಾಹಿತಿ ಪಡೆಯಬಹುದು. 181ಕ್ಕೆ ಕರೆ ಮಾಡಿದರೆ ಅಲ್ಲಿನ ಆಪರೇಟರ್‌ಗಳು ದೂರುದಾರರಿಂದ ಮಾಹಿತಿ ಪಡೆಯುತ್ತಾರೆ. ನಂತರ ದೂರುದಾರರು ಯಾವ ತಾಲೂಕಿಗೆ ಬರುವರೋ ಆ ತಾಲೂಕಿನ ಸಂಬಂಧಪಟ್ಟ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸುವರು. ಅವರಿಂದ ಮಾಹಿತಿ ಪಡೆದು, ಫಲಾನುಭವಿಗಳಿಗೆ ತಲುಪಿಸುವರು.

About The Author

Leave a Reply