January 31, 2026
WhatsApp Image 2026-01-07 at 3.09.58 PM

ಪಾಪಿ ತಂದೆ ಹಣದಾಸೆಗಾಗಿ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿರುವ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ನಡೆದಿದೆ.

ಅಮಾನವೀಯ ಘಟನೆ

ತಾಯಿಯನ್ನು ಕಳೆದುಕೊಂಡಿದ್ದ ಅಪ್ರಾಪ್ತ ಬಾಲಕಿ ಅಜ್ಜಿ ಮನೆಯಲ್ಲಿ ಪಿಯುಸಿವರೆಗೂ ವ್ಯಾಸಂಗ ಮಾಡಿದ್ದಳು. ನಂತರ ಕಳೆದ ಡಿಸೆಂಬರ್ ನಲ್ಲಿ ಅಜ್ಜಿ ಮನೆಯಿಂದ ತನ್ನ ತಂದೆಯ ಜೊತೆಗೆ ತನ್ನ ಮನೆಗೆ ತೆರಳಿದ್ದಳು. ಮತ್ತೆ ಅಜ್ಜಿ ಕರೆದಳು ಎಂಬ ಕಾರಣಕ್ಕೆ ಅಜ್ಜಿ ಮನೆಗೆ ಬಾಲಕಿ ವಾಪಸ್ ಆಗಿದ್ದಾಳೆ. ಈ ವೇಳೆ ಅಜ್ಜಿ ಮನೆಗೆ ಬಂದಿದ್ದ ಭರತ್ ಶೆಟ್ಟಿ ಎಂಬಾತ ತಂದೆ-ಮಗಳ ಜೊತೆ ಸಲುಗೆ ಬೆಳೆಸಿ ನಮ್ಮ ಮನೆಗೂ ಬಂದು ಹೋಗಿ ಎಂದು ಹೇಳಿ ಹೋಗಿದ್ದಾರೆ.

ತಂದೆ ಮಗಳಿಬ್ಬರೂ ಭರತ್ನೊಂದಿಗೆ ಮಂಗಳೂರಿಗೆ ತೆರಳಿದ್ದರು. ಮಾರ್ಗ ಮಧ್ಯದಲ್ಲಿ ತಾನು ಮುಟ್ಟಾಗಿರುವುದಾಗಿ ತಂದೆಗೆ ತಿಳಿಸಿದ್ದಳು. ಕರುಣೆ ತೋರದ ತಂದೆ ಅಮಾನವೀಯವಾಗಿ ವರ್ತಿಸಿದ್ದಾನೆ. ನಂತರ ಅಪ್ರಾಪ್ತೆ ಬಳಿ ಭರತ್ ಹಾಗೂ ಆತನ 4-5 ಮಂದಿ ಸಹಚರರು ಬಂದು ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸುತ್ತಾರೆ. ಭರತ್ ಹೇಳಿದಂತೆ 3-4 ಮಂದಿ ಆಕೆಯನ್ನ ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ. ಬಿಟ್ಟು ಬಿಡಿ ಎಂದು ಬಾಲಕಿ ಎಷ್ಟೇ ಕೇಳಿಕೊಂಡರೂ ಕರುಣೆ ತೋರದ ಕಾಮುಕರು ಬಾಲಕಿ ಮೇಲೆ ಎರಗಿ ಬೀಳುತ್ತಾರೆ. ಸದ್ಯ ಅಪ್ತಾಪ್ತ ಬಾಲಕಿ ನೀಡಿದ ದೂರಿನ ಮೇರೆಗೆ ಭರತ್ ಶೆಟ್ಟಿ, ಬಾಲಕಿಯ ತಂದೆ, ಅಜ್ಜಿ ಸೇರಿದಂತೆ ಒಟ್ಟು 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

About The Author

Leave a Reply