January 28, 2026
WhatsApp Image 2026-01-18 at 9.27.56 AM

 ಮಾನ್ಯ ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ದಿನಾಂಕ 17-12-2026ರಂದು, ನ್ಯಾಯಾಲಯದ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಮತ್ತು ನಿರಂತರವಾಗಿ ಉಲ್ಲಂಘಿಸಿದ ಕಾರಣ, ವಿಠಲ್ ಗೌಡ ಅವರ ವಿರುದ್ಧ 30 ದಿನಗಳ ಸಿವಿಲ್ ಕಾರಾಗೃಹ ಶಿಕ್ಷೆ ವಿಧಿಸಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ, ಅದರ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಅವರ ಕುಟುಂಬದ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳ ಕುರಿತು ಅಪವಾದಾತ್ಮಕ ಹೇಳಿಕೆಗಳನ್ನು ನೀಡಬಾರದು ಅಥವಾ ಪ್ರಕಟಿಸಬಾರದು ಎಂಬಂತೆ ನ್ಯಾಯಾಲಯ ನೀಡಿದ್ದ ಸ್ಪಷ್ಟ ನಿಷೇಧಾಜ್ಞೆ (ಇಂಜಕ್ಷನ್ ಆದೇಶ) ಇದ್ದರೂ, ಆರೋಪಿತ ವಿಟ್ಟಲ್ ಗೌಡ ಅವರು ಅದನ್ನು ಉಲ್ಲಂಘಿಸಿ ಪುನಃಪುನಃ ಹೇಳಿಕೆಗಳನ್ನು ನೀಡಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ.

ನ್ಯಾಯಾಲಯದ ಆದೇಶಗಳ ಬಗ್ಗೆ ಸಂಪೂರ್ಣ ಅರಿವು ಇದ್ದರೂ, ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕೃತ, ಕೃತಕ ಹಾಗೂ ಸುಳ್ಳು ಕಥನಗಳನ್ನು ಆಧರಿಸಿ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಕುಟುಂಬ ಹಾಗೂ ಸಂಸ್ಥೆಗಳ ವಿರುದ್ಧ ಆರೋಪಿತರು ಹೇಳಿಕೆಗಳನ್ನು ನೀಡಿದ್ದು ಮತ್ತು ಪ್ರಕಟಿಸಿದ್ದು ನ್ಯಾಯಾಲಯದ ಅವಮಾನ ಹಾಗೂ ಇಚ್ಛಾಪೂರ್ವಕ ಅವಿಧೇಯತೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ದಾಖಲೆಗಳ ಪರಿಶೀಲನೆಯ ನಂತರ, ಆರೋಪಿತರು ನೀಡಿದ ಹೇಳಿಕೆಗಳು ಸುಳ್ಳು, ಆಧಾರರಹಿತ ಮತ್ತು ಯಾವುದೇ ತಾತ್ವಿಕ ಮೌಲ್ಯವಿಲ್ಲದವು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಾಲಯದ ಘನತೆ ಮತ್ತು ಆದೇಶಗಳ ಪ್ರಾಮಾಣಿಕತೆಯನ್ನು ಕಾಪಾಡಲು ಕಠಿಣ ಕ್ರಮ ಅಗತ್ಯವೆಂದು ಹೇಳಿದೆ.

ಈ ಪ್ರಕರಣದ ವಿಚಾರಣೆಯಲ್ಲಿ ನ್ಯಾಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಪರವಾಗಿ ಹಿರಿಯ ವಕೀಲರಾದ ಎಸ್. ರಾಜಶೇಖರ್ ಹಿಲ್ಲಿಯಾರು ಅವರು ವಾದ ಮಂಡಿಸಿದರು.

ಎಲ್ಲಾ ಅಂಶಗಳನ್ನು ಪರಿಗಣಿಸಿದ ನಂತರ, ನ್ಯಾಯದ ಅಂತಿಮ ಉದ್ದೇಶ ಸಾಧಿಸಲು, ಆರೋಪಿತ ವಿಟ್ಟಲ್ ಗೌಡ ಅವರಿಗೆ 30 ದಿನಗಳ ಸಿವಿಲ್ ಬಂಧನ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.

About The Author

Leave a Reply