January 28, 2026
WhatsApp Image 2026-01-18 at 4.48.32 PM

ರಾಜ್ಯದಲ್ಲಿ ಆನ್ಲೈನ್ ಬೆಟ್ಟಿಂಗ್ಗೆ ಇದೀಗ ಮತ್ತೊಂದು ಬಲಿಯಾಗಿದೆ. ಆನ್ಲೈನ್ ಬೆಟ್ಟಿಂಗ್ ನಿಂದ ಸಾಲದ ಸುಳಿಗೆ ಸಿಲುಕಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದ ಚೌಡಯ್ಯ ನಗರದಲ್ಲಿ ಈ ಒಂದು ಘಟನೆ ಸಂಭವಿಸಿದೆ.

ಮನೆಯಲ್ಲಿ ನೇಣು ತೆಗೆದುಕೊಂಡು ರಮೇಶ ಬಂಟನೂರು (21) ಆತ್ಮಹತ್ಯೆಗೆ ಶರಣಾರದ ಯುವಕ ಎಂದು ತಿಳಿದು ಬಂದಿದ್ದು, ರಮೇಶ್ ಬಂಟನೂರು ಜಮಖಂಡಿಯ ಖಾಸಗಿ ಕಾಲೇಜಿನಲ್ಲಿ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ. ಆನ್ಲೈನ್ ಬೆಟ್ಟಿಂಗ್ ನಿಂದ ರಮೇಶ್ ಲಕ್ಷಾಂತರ ಸಾಲ ಮಾಡಿಕೊಂಡಿದ್ದ.

ಈ ಹಿಂದೆ ರಮೇಶ್ ಮಾಡಿಕೊಂಡಿದ್ದ ಸಾಲವನ್ನು ತಂದೆಯೇ ಎರಡು ಬಾರಿ ತೀರಿಸಿದ್ದರು. ಮತ್ತೆ ಆನ್ಲೈನ್ ಬೆಟ್ಟಿಂಗ್ ಆಡಬೇಡ ಎಂದು ತಂದೆ ಬುದ್ಧಿವಾದ ಸಹ ಹೇಳಿದ್ದರು. ಬೈದು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಜಮಖಂಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

About The Author

Leave a Reply