January 28, 2026
WhatsApp Image 2026-01-19 at 5.08.15 PM

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರರಾವ್ ಅವರ ತಲೆದಂಡ ಆಗಿದೆ. ವಿಡಿಯೋ ವೈರಲ್ ಬೆನ್ನಲ್ಲೇ ಪ್ರಕರಣದ ಗಂಭೀರತೆಯನ್ನ ಅರಿತು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ.

ರಾಮಚಂದ್ರರಾವ್ DCRE DGP ಆಗಿದ್ದರು. (ನಾಗರೀಕ ಹಕ್ಕು ಜಾರಿ‌ ನಿರ್ದೇಶನಾಲಯ) 1993 ಬ್ಯಾಚ್​​ನ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದ ರಾಮಚಂದ್ರರಾವ್, ಬೆಳಗಾವಿಯಲ್ಲಿ  IGP ಆಗಿದ್ದ ವೇಳೆಯಲ್ಲಿನ ಅಶ್ಲೀಲ ವಿಡಿಯೋ ವೈರಲ್ ಆಗಿದೆ. ಕಚೇರಿಯಲ್ಲಿ ಹಲವು ಮಹಿಳೆಯರ ಜೊತೆಗಿನ ಅಶ್ಲೀಲ ವಿಡಿಯೋ ವೈರಲ್ ಆಗಿವೆ. 

ವಿಡಿಯೋ ವೈರಲ್ ಬೆನ್ನಲ್ಲೇ, ಅಧಿಕಾರಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳೋದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಇದೀಗ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಡಿಜಿಪಿ ವಿರುದ್ಧ ತಡವಾಗಿ ಸರ್ಕಾರ ಕ್ರಮಕೈಗೊಂಡಿತಾ ಎಂಬ ಪ್ರಶ್ನೆಯೂ ಎದ್ದಿದೆ. ಅಧಿವೇಶನದಲ್ಲಿ ಮುಜುಗರ ತಪ್ಪಿಸಿಕೊಳ್ಳಲು ಈಗ ಸಸ್ಪೆಂಡ್​ ಮಾಡಿದೆ ಎನ್ನಲಾಗುತ್ತಿದೆ. ಜನವರಿ 24ಕ್ಕೆ ವಿಶೇಷ ಜಂಟಿ ಅಧಿವೇಶನವನ್ನು ಸರ್ಕಾರ ಕರೆದಿದೆ. ಇನ್ನು ಅಧಿವೇಶನದಲ್ಲಿ ಡಿಜಿಪಿ ಪ್ರಕರಣ ಅಸ್ತ್ರ ಮಾಡಿಕೊಳ್ಳಲು ಬಿಜೆಪಿ ಪ್ಲಾನ್ ಮಾಡಿದೆ. ವಿಪಕ್ಷಗಳ ಬಾಯಿಗೆ ಆಹಾರವಾಗದೇ ಇರಲು ಡಿಜಿಪಿ ಅಮಾನತು ಮಾಡಿದೆ. 

About The Author

Leave a Reply