January 27, 2026
WhatsApp Image 2026-01-26 at 3.50.27 PM

ವಿಟ್ಲ: ಪಿ.ಎಂ.ಶ್ರೀ (RMSA) ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಟ್ಲ ಇದರ 2026–2029 ಅವಧಿಯ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್.ಡಿ.ಎಂ.ಸಿ.)ಯ ನೂತನ ಅಧ್ಯಕ್ಷರಾಗಿ ಸಿ.ರವಿಶಂಕರ್ ಶಾಸ್ತ್ರಿ ಹಾಗೂ ಉಪಾಧ್ಯಕ್ಷರಾಗಿ ವಿಶಾಲಾಕ್ಷಿ ಅಮೀನ್ ಆಯ್ಕೆಯಾಗಿದ್ದಾರೆ.

ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ಗೌಡ ನಾಯ್ತೋಟು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರೂ ಪದನಿಮಿತ್ತ ಸದಸ್ಯರಾದ ರವಿಪ್ರಕಾಶ್ ವಿಟ್ಲ ಅವರು ಗೌರವ ಉಪಸ್ಥಿತರಿದ್ದರು.

ರಾಜ್ಯದಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಹೆಗ್ಗಳಿಕೆ ಈ ಶಾಲೆಗಿದೆ, ಪಾಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ರಾಜ್ಯಮಟ್ಟದಲ್ಲಿ ವಿಶೇಷ ಗುರುತನ್ನು ಪಡೆದುಕೊಂಡಿದೆ. ಕಲಾ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ, ವಿಶೇಷವಾಗಿ ಕಬಡ್ಡಿ ವಿಭಾಗದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಧನೆಗಳೊಂದಿಗೆ ಶಾಲೆ ಗಮನಸೆಳೆದಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಆಡಳಿತ ವ್ಯವಸ್ಥೆ ಹಾಗೂ ಶಿಕ್ಷಕರ ಶ್ರಮವೇ ಈ ಸಾಧನೆಗೆ ಮೂಲ ಕಾರಣವಾಗಿದೆ.

ನೂತನವಾಗಿ ರಚನೆಯಾದ ಎಸ್.ಡಿ.ಎಂ.ಸಿ.ಯಲ್ಲಿ ಹೊನ್ನಮ್ಮ, ಎನ್.ಕೃಷ್ಣ, ಯಶೋದ, ಹಸೈನಾರ್ ತಾಳಿತ್ತನೂಜಿ, ಕೈರುನ್ನಿಸಾ, ಬಿ.ಅಶ್ರಫ್, ಪ್ರಮೀಳಾ ಡಿ’ಸೋಜಾ, ರತನ್ ಆಳ್ವ, ಚಂದಪ್ಪ ಗೌಡ, ಆಶೋಕ್ ಅನಿಲಕಟ್ಟೆ, ರವಿ ವರ್ಮ, ದೀಪಾ, ವಿನಯಚಂದ್ರ, ಯೋಗಿತ, ಚಿತ್ರಾವತಿ ಹಾಗೂ ಅನುರಾಧಾ ಅವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ಆಯ್ಕೆ ಪ್ರಕ್ರಿಯನ್ನು ಶಾಲಾ ಪ್ರಬಾರ ಮುಖ್ಯ ಶಿಕ್ಷಕಿ ಶ್ರೀಮತಿ ಶ್ರೀಮತಿ ಮೇಡಂ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಮಕ್ಕಳ ಪೋಷಕರು,ಶಿಕ್ಷಕ ವೃಂದ ಉಪಸ್ಥಿತಿತರಿದ್ದರು.

About The Author

Leave a Reply