January 31, 2026
WhatsApp Image 2026-01-26 at 11.14.17 AM

ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಪಡುಬಿದ್ರೆ ಸಮೀಪದ ದೀನ್ ಸ್ಟ್ರೀಟ್‌ನಲ್ಲಿ ರಾತ್ರಿ ವೇಳೆ ನಡೆದಿದೆ.  ಮುಹಮ್ಮದ್ ಅಪ್ತಾಬ್ ಅಲಿ ಎಂಬವರ ತಾಯಿ ಮನೆಗೆ ಬೀಗ ಹಾಕಿ ಅಲ್ಲೇ ಹತ್ತಿರದಲ್ಲಿದ್ದ ಮಗಳ ಮನೆಗೆ ತೆರಳಿದ್ದರು.

ಬುಧವಾರ ಮುಂಜಾನೆ ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಕಪಾಟನ್ನು ತುಂಡರಿಸಿ ಅದರಲ್ಲಿದ್ದ 7 ಪವನ್ ಚಿನ್ನದ ನೆಕ್ಲೆಸ್, 5 ಪವನ್ ತೂಕದ ಚಿನ್ನದ ನೆಕ್ಲೆಸ್, ಸುಮಾರು 3 ಪವನ್ ತೂಕದ ಚಿನ್ನದ ಸಣ್ಣ ಚೌಕರ್ ನೆಕ್ಲೆಸ್, ಸುಮಾರು 2.5 ಪವನ್ ತೂಕದ ಚಿನ್ನದ ಸಣ್ಣ ಚೌಕರ್ ನೆಕ್ಲೆಸ್, 15 ಪವನ್ ತೂಕದ ಬಂಗಾರದ ಬಳೆಗಳು, 3 ಪವನ್ ತೂಕದ ಬಂಗಾರದ ಬ್ರೇಸ್ಲೇಟ್, 1 ಪವನ್ ತೂಕದ ಚಿನ್ನದ ಉಂಗುರ, 3 ಪವನ್ ತೂಕದ ಚಿನ್ನದ ಉಂಗುರಗಳು ಸಹಿತ ಮುತ್ತಿನ ಮಣಿಯ ಚಿನ್ನದ ಸರ, ಸಣ್ಣ ಚಿನ್ನದ ಸರಗಳು, ಕಿವಿಯೋಲೆ ಸೇರಿದಂತೆ ಒಟ್ಟು 70 ಪವನ್ ತೂಕದ 48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 50000 ರೂ. ಮೌಲ್ಯದ ರಾಡೋ ವಾಚನ್ನು ಕಳವುಗೈದಿದ್ದಾರೆ.

ಸ್ಥಳಕ್ಕೆ ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್, ಡಿವೈಎಸ್ಪಿ ಪ್ರಭು ಡಿ.ಟಿ., ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ, ಪಡುಬಿದ್ರಿ ಠಾಣಾಧಿಕಾರಿ ಶಕ್ತಿವೇಲು ಸಹಿತ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನ ದಳ, ವೈಜ್ಞಾನಿಕವಾಗಿ ತನಿಖೆ ನಡೆಸಿದ್ದಾರೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply