January 31, 2026
WhatsApp Image 2026-01-22 at 3.19.21 PM

ಬೆಂಗಳೂರು : ಮಹಾತ್ಮ ಗಾಂಧೀಜಿಯನ್ನು ಓರ್ವ ಮತಾಂಧ ಕೊಂದು ಹಾಕಿದ. ಗಾಂಧೀಜಿಯನ್ನು ನಾಥುರಾಮ್ ಗೋಡ್ಸೆ ಕೊಂದು ಹಾಕಿದ. ಅಹಿಂಸಾ ಪರಮೋಧರ್ಮ ಅಂತ ಗಾಂಧೀಜಿ ತಿಳಿಸಿದರು. ಮಹಾತ್ಮ ಗಾಂಧೀಜಿ ಅವರಿಗೆ ಯಾವುದೇ ಸ್ವಾರ್ಥ ಇರಲಿಲ್ಲ. ಗಾಂಧೀಜಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರು ದೇಶ ಸ್ವತಂತ್ರ ಆಗಬೇಕು ಅಷ್ಟೇ ಅಂತ ಗಾಂಧೀಜಿ ಮನಸ್ಸಿನಲ್ಲಿ ಇತ್ತು ಸ್ವತಂತ್ರ ಸಿಗಬೇಕು ನಾವು ಗೌರವ ಸಲ್ಲಿಸಬೇಕೆಂದರೆ ಗಾಂಧೀಜಿ ಅವರ ತತ್ವ ಅನುಸರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತ ಬಲಿದಾನವನ್ನು ಸ್ಮರಿಸಬೇಕು. ಗಾಂಧೀಜಿಯವರು ಸ್ವಾತಂತ್ರ್ಯ ಚಳುವಳಿಯ ನೇತೃತ್ವವನ್ನು ವಹಿಸಿದ್ದರು. ಈ ದಿನವನ್ನು ದೇಶದ ಜನರು ಸ್ಮರಿಸಿಕೊಳ್ಳುತ್ತಾರೆ. ಅವರು ಸಮಾಜಕ್ಕೆ ಮಾಡಿರುವ ಸೇವೆಯನ್ನು ಸ್ಮರಿಸಿಕೊಳ್ಳಬೇಕು, ಗಾಂಧೀಜಿ ಅವರು ಎಲ್ಲಾ ತ್ಯಾಗ ಮಾಡಿದರು ಜೈಲಿಗೆ ಸಹ ಹೋಗಿದ್ದರು. ಮಹಾತ್ಮ ಗಾಂಧೀಜಿಯವರು ಇಡೀ ದೇಶವನ್ನು ಸುತ್ತಿದ್ದರು.ಕಾಂಗ್ರೆಸ್ ಪಕ್ಷ ಗಾಂಧೀಜಿ ನೇತೃತ್ವದಲ್ಲಿ ಹೋರಾಟ ಮಾಡಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇನ್ನು ರಾಜ್ಯದ 6 ಸಾವಿರ ಗ್ರಾಮ ಪಂಚಾಯಿತಿಗಳಿಗೆ ಗಾಂಧೀಜಿ ಅವರ ಹೆಸರು ಇಡುತ್ತೇವೆ. ಗ್ರಾಮಗಳು ಸ್ವಾವಲಂಬನೆ ಆಗದಿದ್ದರೆ ದೇಶವು ಪ್ರಗತಿ ಆಗುವುದಿಲ್ಲ. ಭಾರತ ಹಳ್ಳಿಗಳ ದೇಶ, ಹಳ್ಳಿಗಳ ಉದ್ಧಾರ ಆಗಬೇಕೆಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಕರ್ನಾಟಕ ರಾಜ್ಯದಲ್ಲಿ 6,000 ಗ್ರಾಮ ಪಂಚಾಯಿತಿಗಳು ಇವೆ. ಗ್ರಾಮ ಪಂಚಾಯಿತಿಗಳಿಗೆ ಗಾಂಧೀಜಿ ಹೆಸರು ಇಡಲು ತೀರ್ಮಾನ ಮಾಡಿದ್ದೇವೆ. ಗ್ರಾಮಸ್ವರಾಜ್ಯ ಕಲ್ಪನೆಯ ಕೊಟ್ಟಿದ್ದು ಮಹಾತ್ಮ ಗಾಂಧೀಜಿ ಅವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

About The Author

Leave a Reply