

ಉಡುಪಿ: ಪ್ರೇಯಸಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ.
ದೂರಿನ್ವಯ’ ಮೃತರಾದ ರಂಜಿತ್ (28) ರವರು ಜ 29 ರಂದು ಪೆಂಟಿಂಗ್ ಕೆಲಸವನ್ನು ಮುಗಿಸಿ ಮನೆಗೆ ಬಂದು ಮನೆಯವರೊಟ್ಟಿಗೆ ಮಾತನಾಡಿ ತಾನು ಪ್ರಿತೀಸುತ್ತಿದ್ದ ಹುಡುಗಿ ಜೊತೆ ಫೋನಿನಲ್ಲಿ ಮಾತನಾಡುತ್ತಾ ಅವರ ರೂಮಿನೊಳಗೆ ಹೋಗಿರುತ್ತಾರೆ.
ಮೃತರ ತಂದೆ ವಾಟರ್ ಟ್ಯಾಂಕಿನ ವಾಲ್ ನ್ನು ಆಫ್ ಮಾಡಲು ಹೋಗುವಾಗ ರಂಜಿತ್ ರೂಮಿನ ಕಿಟಕಿ ತೆರೆದಿದ್ದು, ಅದರ ಬಳಿ ಹೋಗಿ ನೋಡಿದಾಗ ರಂಜಿತ್ ನು ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ಕಂಡು ಆತನನ್ನು ಕೆಳಗೆ ಇಳಿಸಿ ಕೂಡಲೇ ಚಿಕಿತ್ಸೆಯ ಬಗ್ಗೆ ಕೆಎಂಸಿ ಮಣಿಪಾಲ ಆಸ್ಪತ್ರೆಗೆ 23:20 ಗಂಟೆಗೆ ಕರೆದುಕೊಂಡು ಹೋಗಿದ್ದಾರೆ.
ವೈದ್ಯರು ರಂಜಿತನಿಗೆ 20 ನಿಮಿಷ ಶೂಶ್ರುಷೆ ಮಾಡಿದ್ದು,ಸಮಯ 23:50 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಫಿರ್ಯಾದುದಾರರ ತಮ್ಮನ ಮರಣದಲ್ಲಿ ಸಂಶಯವರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯು ಡಿ ಆರ್ ಕ್ರಮಾಂಕ:006/2026 ,ಕಲಂ: 194(3)(IV) ಬಿ ಎನ್ ಎಸ್ ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ.






