

ಮಂಗಳೂರಿನ ಪುರಭವನದ ಸಮೀಪವಿರುವ ಪೋಲಿಸ್ ವಸತಿ ಗೃಹಕ್ಕೆ ನುಗ್ಗಿದ ಕಳ್ಳರು ಬೆಲೆಬಾಳುವ ವಸ್ತುಗಳನ್ನು ಕಳವುಗೈದಿದ್ದಾರೆ.
ಪೊಲೀಸ್ ಲೇನಿನ ಎ1 ಬ್ಲಾಕ್‌ನಲ್ಲಿರುವ ಮನೆಯಲ್ಲಿ ಕಳ್ಳತನ ನಡೆದಿದೆ. ದ.ಕ ಜಿಲ್ಲೆಯ ಕಂಟ್ರೋಲ್ ರೂಮಲ್ಲಿ ಕೆಲಸ ಮಾಡುತ್ತಿರುವ ಸಮರ್ಥ್ ಎಂಬವರು ರಜೆ ಮೇಲೆ ಊರಿಗೆ ತೆರಳಿದ್ದ ವೇಳೆ ಅವರ ಮನೆಯ ಬಾಗಿಲು ಮುರಿದು ಕಳ್ಳರು ಒಳನುಗ್ಗಿದ್ದಾರೆ.
ಮನೆಯ ಗೋಡ್ರೇಜ್ ಚೆಲ್ಲಾಪಿಲ್ಲಿ ಮಾಡಿ ಹೋಗಿದ್ದು ಹಲವು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ. ಸ್ಥಳಕ್ಕೆ ದಕ್ಷಿಣ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಕ್ರೈಂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಪೋಲಿಸ್ ಲೈನ್ ನ ಮೂರು ಗೇಟ್ ಗಳು ತೆರೆದಿದ್ದು ಯಾವುದೇ ಭದ್ರತೆ ಇಲ್ಲದ ಕಾರಣ ಕೇರಳ ರಾಜ್ಯದ ವ್ಯಕ್ತಿಗಳು ನಿರಂತರ ಬಂದು ಹೋಗುತ್ತಿರುವುದು ಕಂಡುಬOದಿದೆ. ಭದ್ರತಾ ಕೊರತೆಯಿಂದಲೇ ಕಳ್ಳತನವಾಗಿದೆ ಎಂದು ಹೇಳಲಾಗುತ್ತಿದೆ.






