

ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಒಂಭತ್ತನೇ ಬಜೆಟ್ ಮಂಡನೆ ಮಾಡಿದ್ದು, ಮಂಡನೆಯಪ್ರಮುಖ ಅಂಶಗಳು ಈ ಕೆಳಗಿನಂತಿವೆ:
ಆರೋಗ್ಯ ಕ್ಷೇತ್ರಕ್ಕೆ ಬಯೋ ಫಾರ್ಮಾ ಶಕ್ತಿ ಯೋಜನೆ
550ಕ್ಕೂ ಹೆಚ್ಚು ಸುಧಾರಣಾ ಕ್ರಮ
ದೇಶವನ್ನು ಔಷಧ ತಯಾರಿಕಾ ಹಬ್ ಮಾಡಲು ಕ್ರಮ
ಬಯೋ ಫಾರ್ಮಾ ಯೋಜನೆಗೆ 1 ಸಾವಿರ ಕೋಟಿ ಮೀಸಲು
ರೇರ್ ಅರ್ಥ್ ಗಣಿಗಾರಿಕೆಗೆ ಪ್ರಾಶಸ್ತ್ರ
ವಿರಳ ಲೋಹಗಳ ಸಂಗ್ರಹಕ್ಕಾಗಿ ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾದಲ್ಲಿ ಕಾರಿಡಾರ್
ಸೆಮಿಕಂಡಕ್ಟರ್ ಮಿಷನ್ 2.0 ಯೋಜನೆ : 40 ಕೋಟಿ ಮೀಸಲು
ಟೆಕ್ಸ್ ಟೈಲ್ ಕ್ಷೇತ್ರದ ಅಭಿವೃದ್ಧಿಗಾಗಿ ರಾಷ್ಟ್ರೀಯ ನೀತಿ ಘೋಷಣೆ
ಕಂಟೈನರ್ ಯೋಜನೆಗೆ 10 ಸಾವಿರ ಕೋಟಿ ಮೀಸಲು
ಖಾದಿ ಗ್ರಾಮೋದ್ಯೋಗ ಯೋಜನೆ
ಸಣ್ಣ ಕೈಗಾರಿಕೆಗೆ 10 ಸಾವಿರ ಕೋಟಿ ಮೀಸಲು
ಸಣ್ಣ- ಅತಿ ಸಣ್ಣ ಕೈಗಾರಿಕೆಗಳಿಗೆ 2 ಸಾವಿರ ಕೋಟಿ ಫಂಡ್
2026 – 27ರ ಬಂಡವಾಳ ವೆಚ್ಚ 12.2 ಕೋಟಿ ಕೋಟಿಗೆ ಏರಿಕೆ
ಮುಂದಿನ 5 ವರ್ಷಗಳಲ್ಲಿ ದೇಶಾದ್ಯಂತ 20 ಜಲಮಾರ್ಗ ನಿರ್ಮಾಣ
2-3ನೇ ಹಂತದ ನಗರಗಳ ಮೂಲ ಸೌಕರ್ಯಗಳ ಅಭಿವೃದ್ಧಿ
ಧಾರ್ಮಿಕ ಹಿನ್ನೆಲೆಯುಳ್ಳ ನಗರಗಳ ಅಭಿವೃದ್ಧಿಗೆ ಆದ್ಯತೆ
ನಗರಗಳ ಅಭಿವೃದ್ಧಿಗೆ 5 ಸಾವಿರ ಕೋಟಿ ಮೀಸಲು
ಬೆಂಗಳೂರು – ಹೈದರಾಬಾದ್, ಬೆಂಗಳೂರು – ಚೆನ್ನೈ ಹೈಸ್ಪೀಡ್ ರೈಲು
ಎಐ ತಂತ್ರಜ್ಞಾನದ ಅಭಿವೃದ್ಧಿಗಾಗಿ ಆದ್ಯತೆ
ವಿದ್ಯೆಯಿಂದ ಉದ್ಯೋಗ ಸೃಷ್ಟಿಗಾಗಿ ವಿಶೇಷ ಸಮಿತಿ ರಚನೆ
ಖಾಸಗಿ ವಲಯದ ಜೊತೆ ಸೇರಿ ದೇಶದಾದ್ಯಂತ 5 ಮೆಡಿಕಲ್ ಹಬ್ ನಿರ್ಮಾಣ.
ಮೆಡಿಕಲ್ ಟೂರಿಸಂ ಯೋಜನೆ ಉತ್ತೇಜನಕ್ಕೆ ಕ್ರಮ
ಆಯುರ್ವೇದಕ್ಕೆ ಹೆಚ್ಚಿನ ಒತ್ತು. 3 ಸಂಸ್ಥೆಗಳ ನಿರ್ಮಾಣ, ಆಯುಷ್ ಫಾರ್ಮಸಿಗಳ ಅಭಿವೃದ್ಧಿ, ಮೆಸಿನ್ ಸೆಂಟರ್ -ರಿಸರ್ಚ್ ಸೆಂಟರ್ ಗಳ ನಿರ್ಮಾಣಕ್ಕೆ ಒತ್ತು
ಮುಂಬೈಯಲ್ಲಿ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಹಾಸ್ಪಿಟಲಿಟಿ
ಹೊಸ ಕ್ರೀಡಾ ಸಂಕೀರ್ಣ ನಿರ್ಮಾಣ : ಜಾಗತಿಕವಾಗಿ ಸ್ಪರ್ಧೆಗಳಿಗೆ ಕ್ರೀಡಾಪಟುಗಳಿಗೆ ತರಬೇತಿ, ಖೇಲೋ ಇಂಡಿಯಾ ಮಿಷನ್ ಯೋಜನೆ
ಕರ್ನಾಟಕ ಕರಾವಳಿಯಲ್ಲಿ ಟ್ರಕ್ಕಿಂಗ್ ಮಾರ್ಗ ಅಭಿವೃದ್ಧಿ
ಈಶಾನ್ಯ ಭಾರತದಲ್ಲಿ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಠಿಗೆ ಅಗತ್ಯ ಕ್ರಮ
ಮೀನುಗಾರಿಕೆ ಮತ್ತು ಪಶುಸಂಗೋಪನೆಗೆ ಒತ್ತು
ತೆಂಗಿನಕಾಯಿ ಉತ್ಪಾದನೆ ಮತ್ತು ಸ್ಪರ್ಧಾತ್ಮಕತೆಗಾಗಿ ಆದ್ಯತೆ
ಹೆಚ್ಚು ಇಳುವರಿಗಾಗಿ ತಳಿಗಳ ಅಭಿವೃದ್ಧಿ
ತೆಂಗಿನ ಕಾಯಿ, ಶ್ರೀಗಂಧ, ಗೋಡಂಬಿ ಬೆಳೆಗಳಿಗೆ ಪ್ರೋತ್ಸಾಹ
ಕೃಷಿ ಉತ್ಪಾದನೆ ವೃದ್ಧಿಗಾಗಿ ಭಾರತ್ ವಿಸ್ತಾರ್ ಯೋಜನೆ
ಮಹಿಳೆಯರಿಗಾಗಿ ಲಕ್ ಪತಿ ದೀದಿ ಯೋಜನೆಗೆ ಮತ್ತಷ್ಟು ಆದ್ಯತೆ
ದಿನಸಿ ಅಂಗಡಿ ಆರಂಭಿಸುವ ಮಹಿಳೆಯರಿಗೆ ವಿಶೇಷ ಸಹಾಯಧನ
ಮಹಿಳೆಯರಿಗೆ She Mart ಯೋಜನೆ
ದಿವ್ಯಾಂಗರಿಗಾಗಿ ವಿಶೇಷ ಯೋಜನೆ ಘೋಷಿಸಿದ ಕೇಂದ್ರ : ಜನ ಕೌಶಲ್ಯ ಯೋಜನೆ
ಪ್ರಮುಖ ನಗರಗಳಿಗೆ 4000 ಎಲೆಕ್ನಿಕ್ ಬಸ್‌ಗಳ ವಿತರಣೆ
ರಾಂಚಿ, ತೇಜ್ ಪುರದಲ್ಲಿ ಹೊಸ ನಿಮ್ಹಾನ್ಸ್ ಆಸ್ಪತ್ರೆಗೆ ಘೋಷಣೆ
16 ನೇ ಹಣಕಾಸು ಆಯೋಗದಡಿ ರಾಜ್ಯಗಳಿಗೆ ಅನುದಾನ
ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ 1.41 ಲಕ್ಷ ಕೋಟಿ
ಹೊಸ ಆದಾಯ ತೆರಿಗೆ ಕಾನೂನು ಘೋಷಣೆ
ಅಪಘಾತ ವಿಮೆ ಹಣಕ್ಕೆ ತೆರಿಗೆ ಇಲ್ಲ
ಸಣ್ಣ ತೆರಿಗೆ ಪಾವತಿದಾರರಿಗೆ ಹೊಸ ನೀತಿ ಘೋಷಣೆ
ಎಪ್ರಿಲ್‌ನಿಂದ ಹೊಸ ಆದಾಯ ತೆರಿಗೆ ನೀತಿ ಜಾರಿ
ಮಾರ್ಚ್ 31ರ ವರೆಗೆ ತೆರಿಗೆ ಸಲ್ಲಿಸಲು ಅವಕಾಶ
ವಿದೇಶದಲ್ಲಿರುವ ಆಸ್ತಿ ಘೋಷಣೆಗೆ 6 ತಿಂಗಳ ಕಾಲಾವಕಾಶ
ಆರೋಗ್ಯ ಮತ್ತು ವಿದ್ಯಾಭ್ಯಾಸ ಟಿಡಿಎಸ್ ಶೇ.5 ರಿಂದ ಶೇ.2ಕ್ಕೆ ಇಳಿಕೆ
ವಿದೇಶ ಯಾತ್ರೆಗಳ ಟಿಸಿಎಸ್ ಶೇ.2ರಷ್ಟು ಕಡಿತ
ಹೊಸದಾಗಿ ಹೂಡಿಕೆ ಮಾಡುವ ವಿದೇಶಿ ಕಂಪೆನಿಗಳಿಗೆ ಟ್ಯಾಕ್ಸ್ ಹಾಲಿ ಡೇ
ಡೇಟಾ ಸರ್ವೀಸ್ ಸೆಂಟರ್ ಕಂಪೆನಿಗಳಿಗಳಿಗೆ ಟ್ಯಾಕ್ಸ್ ವಿನಾಯಿತಿ
ತೆರಿಗೆ ಸಲ್ಲಿಕೆ ತಪ್ಪಿದ್ದಲ್ಲಿ ಇನ್ಮುಂದೆ ಶಿಕ್ಷೆಯಿಲ್ಲ, ಬದಲಿಗೆ ದಂಡ
ಶೇ.10 ರಷ್ಟು ದಂಡ ವಿಧಿಸುವ ಬಗ್ಗೆ ಪ್ರಸ್ತಾಪ
ವಿಮಾನಗಳ ಬಿಡಿಭಾಗಗಳ ಆಮದು ಸುಂಕ ಇಳಿಕೆ
ಚರ್ಮೋತ್ಪನ್ನಗಳ ಮೇಲಿನ ಆಮದು ಸುಂಕ ಇಳಿಕೆ
ಮದ್ಯದ ಬೆಲೆಯಲ್ಲಿ ಏರಿಕೆ, ಸಿಗರೇಟ್ ಮೇಲಿನ ಸುಂಕ ಏರಿಕೆ
ಅಣುವಿದ್ಯುತ್ ಸ್ಥಾವರ ಪರಿಕರಗಳ ಆಮದು ಸುಂಕ ಇಳಿಕೆ
17 ಕ್ಯಾನ್ಸರ್ ಔಷಧಗಳಿಗೆ ತೆರಿಗೆ ವಿನಾಯಿತಿ
ಸೋಲಾರ್ ಬಿಡಿಭಾಗಗಳ ದರ ಇಳಿಕೆ






