February 4, 2026
WhatsApp Image 2026-02-04 at 4.29.36 PM

ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಲಂಚ ಆರೋಪ ಪ್ರಕರಣ ಸಂಬಂಧ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಸಚಿವ ತಿಮ್ಮಾಪುರ ರಾಜೀನಾಮೆ ನೀಡಬೇಕೆಂದು ಧರಣಿ ನಡೆಸಿವೆ. ನಿನ್ನೆ ಅಹೋರಾತ್ರಿ ಧರಣಿ ನಡೆಸಿ ತಿಮ್ಮಾಪುರ ರಾಜೀನಾಮೆಗೆ ಪಟ್ಟು ಹಿಡಿದಿವೆ.

ಈ ವೇಳೆ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಹಾಗೂ ಅರಸೀಕರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ವೈಯಕ್ತಿಕವಾಗಿ ಬೈದಾಡಿಕೊಂಡಿಕೊಂಡಿರುವ ಪ್ರಸಂಗ ನಡೆದಿದೆ. ದೇವೇಗೌಡ್ರಿಗೆ ದೋಖಾ ಮಾಡಿದ ಶಿವಲಿಂಗೇಗೌಡಗೆ ಧಿಕ್ಕಾರ ಎಂದು ಎಂದು ಶರಣು ಸಲಗರ್ ಘೋಷಣೆ ಕೂಗಿದರು. ಇದರಿಂದ ಕೆರಳಿದ ಶಿವಲಿಂಗೇಗೌಡ, ಚಿಂಚೋಳಿಯಲ್ಲಿ ನಿನ್ನ ಹೆಂಡತಿಯನ್ನು ತಹಶೀಲ್ದಾರ್ ಬಿಟ್ಟುಕೊಂಡು ಎಷ್ಟು ದುಡ್ಡು ಹೊಡೆದಿದ್ದೀಯಾ ಎಂದು ಗೊತ್ತಿದೆ.

ಆರ್ಎಸ್ಎಸ್ ನವರೇ ನಿಮ್ಮ ಯೋಗ್ಯತೆಗೆ ಬೆಂಕಿ ಹಾಕ. ನಿಮಗೆ ಮಾನ ಮರ್ಯಾದೆ ಏನಾದರೂ ಇದೆಯಾ? ಸದನದಲ್ಲಿ ನಾವು ಕೂಡ ಈ ಹಿಂದೆ ಅನೇಕ ಧರಣಿ ಮಾಡಿದ್ದೇವೆ ಆದರೆ ನಿಮ್ಮ ತರಹ ಈ ರೀತಿ ಅಸಹ್ಯವಾಗಿ ಧರಣಿ ಮಾಡಿಲ್ಲ. ನಾಚಿಕೆ ಮಾನ ಮರ್ಯಾದೆ ಇದ್ದವರು ಈ ರೀತಿ ಅಸಹ್ಯವಾಗಿ ಧರಣಿ ಮಾಡುತ್ತಿರಲಿಲ್ಲ ಎಂದು ಧರಣಿ ಮಾಡುತ್ತಿದ್ದವರ ವಿರುದ್ಧ ವಾಗ್ದಾಳಿ ನಡೆಸಿದರು.

About The Author

Leave a Reply