

ವಿಟ್ಲ: ತಾಲೂಕಿನ ಕನ್ಯಾನ ಗ್ರಾಮದ ಪಾದೇಕಲ್ಲು ಎಂಬಲ್ಲಿ ದಾಖಲಾತಿ ಮತ್ತು ಪರವಾನಿಗೆಯಲ್ಲಿ ( MDP No.252617431T003662), (Lease No.DSKN5413) ಬಾಕ್ಸೈಟ್ ಮಣ್ಣು ಲಾರಿಗಳ ಮುಖಾಂತರ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದು, ಬಾಕ್ಸೈಟ್ ಸಾಗಾಟ ಮಾಡುತ್ತಿದ್ದ ಬಗ್ಗೆ ಶಾಲಾ ಮಕ್ಕಳಿಗೆ ಶಾಲೆಗೆ ಹೋಗಿ ಬರುವಾಗ ತೊಂದರೆಯಾಗುತ್ತಿರುವ ಬಗ್ಗೆ ಡಿ.30 ರಂದು ಸ್ಥಳೀಯರು ಪ್ರತಿಭಟನೆ ಮಾಡಿದ್ದರು.
ಈ ಹಿನ್ನೆಲೆ ಶಾಲಾ ಮಕ್ಕಳು ಬೆಳಗ್ಗೆ ಶಾಲೆಗೆ ಹೋಗುವ ಸಮಯ ಮತ್ತು ಶಾಲೆ ಬಿಡುವ ಸಮಯ ಲಾರಿಗಳನ್ನು ಸಂಚಾರ ಮಾಡದಂತೆ ಬಾಕ್ಸೈಟ್ ಸರಕು ಸಾಗಾಣಿಕೆ ಮಾಡುವವರಿಗೆ ಪೊಲೀಸ್ ಇಲಾಖೆಯಿಂದ ತಿಳುವಳಿಕೆ ನೀಡಲಾಗಿದೆ.






