February 16, 2026
WhatsApp Image 2026-02-16 at 11.19.12 AM

ಮಂಗಳೂರು : ಜನರು ಅನಾರೋಗ್ಯಕ್ಕೆ ಈಡಾದಾಗ ಔಷಧಿಗೆ ಬರುವ ಸಂದರ್ಭ ಮಾನವೀಯ ಹಾಗೂ ಸೇವಾ ರೂಪದಲ್ಲಿ ಬೇಕಾದ ಔಷಧಿಗಳನ್ನು ಕ್ಲಪ್ತ ಸಮಯದಲ್ಲಿ ನೀಡುವಂತಾಗಬೇಕು. ಇದರಿಂದ ಗ್ರಾಹಕರು ಹಾಗೂ ಉದ್ಯಮದ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಮಂಗಳೂರಿನ ಬಲ್ಮಠ ರಸ್ತೆಯಲ್ಲಿರುವ ಮೈಲ್ ಸ್ಟೋನ್ -25 ಕಟ್ಟಡದಲ್ಲಿ ಸ್ವಾತಿ ಗಣೇಶ್ ಮಾಲಕತ್ವದ ನ್ಯಾಚುರಲ್ ಗ್ರೂಪ್ ಇವರ ಸಂಪೂರ್ಣ ಹವಾ ನಿಯಂತ್ರಿತ ಔಷಧಿಯ ಮಳಿಗೆ ನ್ಯಾಚುರಲ್ ಮೆಡಿಕಲ್ಸ್ ನ 2ನೇ ಬ್ರಾಂಚ್ ನ್ನು ಉದ್ಘಾಟಿಸಿ ಅವರು ಮಾನಾಡಿದರು.ಮಂಗಳೂರು ಬೆಳೆಯುತ್ತಿರುವ ನಗರವಾಗಿದ್ದು ಆರೋಗ್ಯ ಕ್ಷೇತ್ರದಲ್ಲಿಯೂ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಹತ್ತಾರು ಮೆಡಿಕಲ್ ಕಾಲೇಜು ಆಸ್ಪತ್ರೆಗಳು ಇಲ್ಲಿದ್ದು, ಇದಕ್ಕೆ ಪೂರಕವಾಗಿ ಎಲ್ಲಾ ಔಷಧಿ ವ್ಯವಸ್ಥೆಗಳು ಒಂದೇ ಸೂರಿ ನಾಡಿ ದೊರಕುವಂತಹ ಮೆಡಿಕಲ್ಸ್ ಕೇಂದ್ರಗಳ ಅಗತ್ಯವಿದೆ.ಈ ನಿಟ್ಟಿನಲ್ಲಿ ನ್ಯಾಚುರಲ್ ಗ್ರೂಪ್ ಸಂಸ್ಥೆ ಉತ್ತಮ ಹೆಜ್ಜೆಯನ್ನು ಇಟ್ಟಿದೆ. ಜನರಿಗೆ ಮನೆ ಬಾಗಿಲಿನಲ್ಲಿ ದೊರಕುವಂತಹ ಔಷಧ ಕೇಂದ್ರಗಳು ಮಂಗಳೂರು ಮಾತ್ರವಲ್ಲದೆ ಇತರ ಜಿಲ್ಲೆಗಳಲ್ಲಿಯೂ ಆರಂಭಿಸಲು ದೇವರು ಶಕ್ತಿ ನೀಡಲಿ ಎಂದು ನುಡಿದರು.
ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಮಂಜು ಕಾರ್ನವರ್,ಆಡಳಿತ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ಅವರುಹೊಸ ಔಷಧಿ ಕೇಂದ್ರದಲ್ಲಿ ಸೇವೆಯ ಜೊತೆಗೆ, ಹಲವು ಮಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟು ಮಹಿಳಾ ಉದ್ಯಮಿ ಸ್ವಾತಿ ಗಣೇಶ ಅವರು ಇತರರಿಗೆ ಮಾದರಿ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಡೆಂಟ್ ಡಾ. ಉದಯ್ ಕುಮಾರ್ ಅವರು ಮಾತನಾಡಿ ಔಷಧಿ ಕೇಂದ್ರಗಳು ಉತ್ತಮ ಸೇವೆ ನೀಡುವ ಜೊತೆಗೆ, ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಅವರು ಆರೋಗ್ಯಯುತವಾಗಿ ಬಾಳಲು ಸಹಕಾರ ನೀಡಬೇಕು ಎಂದರು.

About The Author

Leave a Reply