

ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಸುಲ್ತಾನ್ ಉಲಮ ಶೈಖುನಾ ಎಪಿ ಉಸ್ತಾದ್ ಅವರು ಭೇಟಿ ಮಾಡಿದ ಸಂದರ್ಭದಲ್ಲಿ ಪ್ರಧಾನಿಯವರು ಅವರಿಗೆ ನೀಡಿದ ಗೌರವವು ಮುಸ್ಲಿಂ ಸಮುದಾಯಕ್ಕೆ ನೀಡಿದ ಗೌರವವೇ ಆಗಿದೆ.
ಒಬ್ಬ ಮುಸ್ಲಿಂ ಧಾರ್ಮಿಕ ವಿದ್ವಾಂಸರಿಗೆ ತೋರಿಸಿದ ಈ ಸರಳತೆ ಗೌರವ ದೇಶದ ಎಲ್ಲ ಸಮುದಾಯವನ್ನು ಪ್ರಧಾನಿ ಯವರು ಸಮಾನ ಗೌರವದ ನಿಲುವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಎಪಿ ಉಸ್ತಾದ್ ರವರಿಗೆ ನೀಡಿದ ಗೌರವವು ಸಮುದಾಯದ ಮನಸ್ಸಿನಲ್ಲಿ ಸಂತೋಷ ಮತ್ತು ಆತ್ಮಗೌರವವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಈ ಘಟನೆ ದೇಶದ ಏಕತೆ, ಸಾಮರಸ್ಯ ಮತ್ತು ಪರಸ್ಪರ ಗೌರವದ ಉತ್ತಮ ಉದಾಹರಣೆಯಾಗಿದೆ.

ಮಹಮ್ಮದ್ ಅಸ್ಗರ್
ನ್ಯಾಯವಾದಿ
ಉಪಾಧ್ಯಕ್ಷರು, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ
ದಕ್ಷಿಣ ಕನ್ನಡ ಜಿಲ್ಲೆ






