February 19, 2026
WhatsApp Image 2026-02-19 at 11.13.27 AM

ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಬಳಿ ಜಮಖಂಡಿ-ಮಿರಜ್ ರಾಜ್ಯ ಹೆದ್ದಾರಿಯಲ್ಲಿ ನಿನ್ನೆ(ಫೆ. 18) ನಡೆದಿದೆ.

ಮೃತರನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜೈಸಿಂಗ್‌ಪುರ ನಿವಾಸಿಗಳಾದ ಗಿರೇಪ್ಪ ಕುಂದ್ರಾಳಿ(38), ಅವರ ಪತ್ನಿ ಮಂಜುಳಾ (27) ಮತ್ತು ಏಳು ವರ್ಷದ ಮಗಳು ಆರಾಧ್ಯ ಎಂದು ಗುರುತಿಸಲಾಗಿದೆ. ಕುಟುಂಬವು ಬೈಕ್‌ನಲ್ಲಿ ಮಿರಜ್‌ನಿಂದ ಜಮಖಂಡಿಗೆ ತೆರಳುತ್ತಿದ್ದ ಎದುರುಗಡೆಯಿಂದ ವೇಗವಾಗಿ ಬಂದ ಲಾರಿ, ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಮಂಜುಳಾ, ಗಿರೇಪ್ಪ ಮತ್ತು ಆರಾಧ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ವ್ಯಕ್ತಿಯ ಶವ ನೀರಿನ ಸಂಪ್‌ ನಲ್ಲಿ ಪತ್ತೆ! ಘಟನಾ ಸ್ಥಳಕ್ಕೆ ಹಾರುಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

About The Author

Leave a Reply