

ಲೂಡೋ ಬೋರ್ಡ್ ಕಾಯಿನ್ ನುಂಗಿ ಬಾಲಕಿ ಸಾವನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಪ್ಲಾಸ್ಟಿಕ್ ಕಾಯಿನ್ ನುಂಗಿ 8 ವರ್ಷದ ತನುಷ್ಕ ಸಾವನ್ನಪ್ಪಿದ್ದಾಳೆ ಸಹೋದರರ ಜೊತೆ ಲೂಡೋ ಆಡುವಾಗ ಈ ಒಂದು ಘಟನೆ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮದಲ್ಲಿ ಈ ಒಂದು ಘೋರ ದುರಂತ ಸಂಭವಿಸಿದೆ.
ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಯಾಗಿರುವ ತನುಷ್ಕ ಗಂಟಲಲ್ಲಿ ಲೂಡೋ ಕಾಯಿನ್ ಸಿಲುಕಿ ಸಾವನ್ನಪ್ಪಿದ್ದಾಳೆ. ಆಟ ಆಡುವ ಸಂದರ್ಭದಲ್ಲಿ ಲೂಡೋ ಕಾಯಿನ್ ಬಾಯಲ್ಲಿ ಇಟ್ಟುಕೊಂಡಿರುತ್ತಾಳೆ. 20 ನಿಮಿಷಗಳ ಕಾಲ ಗಂಟಲಲ್ಲಿ ಸಿಲುಕಿ ಉಸಿರಾಡಲು ಸಾಧ್ಯವಾಗದೆ ನರಳಾಡಿದ್ದಾಳೆ. ತಕ್ಷಣ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಆಗಲಿ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿದೆ.






