

ಕೊಡಿಯಾಲ ಗ್ರಾಮದ ಪೊಟ್ರೆ -ಮಾಲೆಂಗ್ರಿ ಕಾಯರ್ತಡ್ಕ ಸಂಪರ್ಕಿಸುವ ನೂತನ ರಸ್ತೆಯ ಉದ್ಘಾಟನೆ ಫೆ.21 ರಂದು ನಡೆಯಿತು. ಎಣ್ಣೂರು ಮಸೀದಿಯ ಬಹು ಅಸ್ಸಯ್ಯದ್ ಝನುಲ್ ಅಬಿದೀನ್ ತಂಞಲ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು. ಮಸೀದಿ ಸಮೀಪದಿಂದ ಪೊಟ್ರೆ ಗ್ರಾಮ ಪಂಚಾಯತ್ ಸಂಪರ್ಕಿಸುವ ಅತೀ ಹತ್ತಿರದ ರಸ್ತೆ ಇದಾಗಿದ್ದು ಸ್ಥಳ ದಾನಿಗಳ ನೆರವಿನಿಂದ ಈ ರಸ್ತೆ ನಿರ್ಮಾಣ ಮಾಡಲಾಯಿತು
ಸದಾನಂದ ಗೌಡ ಮಾಲೆಂಗಿರಿ, ಇಸ್ಮಾಯಿಲ್ ಬಿ.ಎಂ, ಇಸಾಕ್, ಬಿ.ಎಂ.ರವರು ಸ್ಥಳದಾನ ಮಾಡಿದ್ದರು. ಅಲ್ಲದೆ ವಾಟ್ಸಾಪ್ ಗ್ರೂಪ್ ಮುಖಾಂತರ ಹಲವಾರು ಜನ ದಾನಿಗಳು ಇದಕ್ಕೆ ಸಹಕಾರ ನೀಡಿದ್ದಾರೆ.ಅಲ್ಲದೆ 45. ಸೆಂಟ್ಸ್ ಜಾಗವನ್ನು ರಸ್ತೆಗಾಗಿ ಖರೀದಿಸಲಾಯಿತು.
ರಸ್ತೆ ಉದ್ಘಾಟನೆಯ ಸಂದರ್ಭದಲ್ಲಿ ಮಾಲೆಂಗಿರಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್ ರಹಮಾನ್, ಮಾಜಿ ಖತೀಬರಾದ ಹಸೈನಾರ್, ಝಹಾರಿ, ಅಧ್ಯಕ್ಷ ಉಮ್ಮರ್ ಮರುಳ್ಯ,ಕಾರ್ಯದರ್ಶಿ ಇಸ್ಮಾಯಿಲ ಎಂ.ಎಂ.,ಉಪಾಧ್ಯಕ್ಷ ಇಸ್ಮಾಯಿಲ್ ಬಿ.ಎಂ, ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್, ಮಲೆಂಗಿರಿ ವಾಟ್ಸಾಪ್ ಗ್ರೂಪ್ ಅಡ್ಮಿನ್ ಶಾಫಿ ಬಿ.ಎಂ, ರಝಾಕ್ ಅಂಕಾಜಲ್ ಅಧ್ಯಕ್ಷರು ರಿಫಾಯಿಯ್ಯದಫ್ ಕಮಿಟಿ ಬೈತಡ್ಕ, ಸುಲೈಮಾನ್ ಬೆದ್ರಾಜೆ ಮುಸ್ಲಿಂ ಯೂತ್ ಫೆಡರೇಶನ್ ಬೈತಡ್ಕ ರಜಾಕ್ ಮಾಲೆಂಗಿರಿ, ರಜಾಕ್
ಮುರುಳ್ಯ,ಇಸಾಕ್ ಮಾಲೆಂಗಿರಿ, ಹಮೀದ್ ಮಾಲೆಂಗಿರಿ ನವಾಜ್, ಮಾಲೆಂಗಿರಿ, ದಾವೂದ್ ಮಾಲೆಂಗಿರಿ, ನಾಸಿರ್ ಮಾಲೆಂಗಿರಿ ಉಮ್ಮರ್ ಮಾಲೆಂಗಿರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು






