February 23, 2026
WhatsApp Image 2026-02-23 at 1.04.48 PM

ಮಂಗಳೂರು: ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತನಕ್ಕೆ ರಾಜೀನಾಮೆ ಸಲ್ಲಿಸಿದ ಯುವ ನಾಯಕ ನವನೀತ್ ಉಳ್ಳಾಲ್ ರಾಜೀನಾಮೆ ಸಲ್ಲಿಸಿದ್ದಾರೆ.

ಅವರ ರಾಜೀನಾಮೆ ಪತ್ರದಲ್ಲಿ ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನಲ್ಲಿ ಕಳೆದ ಒಂದುವರೆ ವರ್ಷಗಳಿಂದ ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಪ್ರಾಥಮಿಕ ಸದಸ್ಯ ಹಾಗೂ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ನನ್ನ ವಿರುದ್ಧ ಮಾರಣಾಂತಿಕ ಹಲ್ಲೆಗೆ ಷಡ್ಯಂತ್ರ, ಪಿತೂರಿ, ಕೊಲೆ ಸಂಚನ್ನು ಸ್ವಪಕ್ಷದ ಬ್ಲಾಕ್ ನಾಯಕರುಗಳಾದ ಉಸ್ಮಾನ್ ಕಲ್ಲಾಪು, ದಿನೇಶ್ ಕುಂಪಲ, ಸುರೇಖಾ ಚಂದ್ರಹಾಸ್, ಮತ್ತು ಚಂದ್ರಹಾಸ್ ರವರು ರೂಪಿಸಿದ್ದು ದಿ.21/02/2026 ರಂದು ನಡೆದ ದೈಹಿಕ ಹಲ್ಲೆ ಮತ್ತು ಮಾನಸಿಕ ನಿಂದನೆಯ ಬಳಿಕ ಅತ್ಯಂತ ಮನನೊಂದು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಮಾನ್ಯತೆ ಇರುವುದಿಲ್ಲವೆಂದು ಪರಿಗಣಿಸಿ ಸ್ವಪಕ್ಷದ ಅವಮಾನಕಾರಿ ನಿರ್ಲಕ್ಷತನದಿಂದ ನಾನು ತೀವ್ರ ಅಸಮಾಧಾನಗೊಂಡು ರಾಜೀನಾಮೆ ಸಲ್ಲಿಸುತ್ತಿದ್ದೇನೆ.

ಆದುದರಿಂದ ಈ ಕೂಡಲೇ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವ ಹಾಗೂ ಕಾರ್ಯಕರ್ತ ಸ್ಥಾನಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ದಯವಿಟ್ಟು ಇದನ್ನು ಅಧಿಕೃತವಾಗಿ ಸ್ವೀಕರಿಸಿ, ನನ್ನ ರಾಜೀನಾಮೆಯ ಕಾರಣಗಳನ್ನು ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಬೇಕೆಂದು ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

About The Author

Leave a Reply