February 24, 2026
WhatsApp Image 2026-02-24 at 11.08.43 AM

ಹುಲಿ ಉಗುರು ಎಂದು ನಂಬಿಸಿ, ನಕಲಿ ಹುಲಿ ಉಗುರು ಮಾರಾಟ ಮಾಡಲು ಯತ್ನಿಸುತ್ತಿದ್ದ ವಂಚಕನನ್ನು ವಶಕ್ಕೆ ಪಡೆಯುವಲ್ಲಿ ಉಡುಪಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ.

ಕಾರ್ಯಚರಣೆಗೆ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ನೆರವಾಗಿದ್ದರು.

ಸನ್ಯಾಸಿ ವೇಷದಲ್ಲಿದ್ದ ವಂಚಕ ಹುಲಿ ಉಗುರು ಅಸಲಿ ಎಂದು ನಂಬಿಸಿ ಮಾರಾಟದ ಯತ್ನದಲ್ಲಿದ್ದಾಗ, ಸಾರ್ವಜನಿಕರು ನಾಗರೀಕ ಸಮಿತಿಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು. ವಂಚಕ ಪಲಾಯನದ ಯತ್ನದಲ್ಲಿದ್ದಾಗ, ನಗರ ಪೋಲಿಸ್ ಠಾಣೆಯ ಪೋಲಿಸರು ಉಡುಪಿ ನಗರದ ಹಳೆ ಬಸ್ಸು ನಿಲ್ದಾಣದಲ್ಲಿ ವಶಕ್ಕೆ ಪಡೆದು ಬಳಿಕ, ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.

About The Author

Leave a Reply