February 26, 2026
WhatsApp Image 2026-02-26 at 12.44.54 PM

ಮಂಗಳೂರು : ಮುಂಬೈ ಸಿಸಿಬಿ ಪೊಲೀಸ್ ಎಂದು ಹೇಳಿ ವ್ಯಕ್ತಿಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ ಬರೋಬ್ಬರಿ 41 ಲಕ್ಷಹಣವನ್ನು ವಸೂಲಿ ಮಾಡಿದ ಘಟನೆ ನಡೆದಿದ್ದು, ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ ಸಂತ್ರಸ್ತ ವ್ಯಕ್ತಿಗೆ ದಿನಾಂಕ 31-01-2026 ರಂದು ಯಾರೋ ಅಪರಿಚಿತ ವ್ಯಕ್ತಿ ದೆಹಲಿಯಿಂದ 8796142545 ಈ ನಂಬರ್ ನಿಂದ ಕರೆ ಮಾಡಿ ಮುಂಬೈ ಸಿಸಿಬಿ ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದಾರೆ. ವೇಳೆ ವ್ಯಕ್ತಿಗೆ ನಿಮ್ಮ ಗುರುತಿನ ಚೀಟಿ ಬಳಸಿಕೊಂಡು ಮುಂಬೈನಲ್ಲಿ ಕೆನರಾ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದಿದ್ದು ಅದರಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿದ್ದು, ಹಾಗೂ ಗುರುತಿನ ಕಾರ್ಡ್ ನಂಬರ್ ನ್ನು ಉಪಯೋಗಿಸಿಕೊಂಡು ಮೊಬೈಲ್ ನಂಬರ್ ನ್ನು ಖರೀದಿಯಾಗಿದೆ ಹಾಗೂ ಕೆನರಾ ಬ್ಯಾಂಕ್ ಖಾತೆ ತರೆದು ಅಕ್ರಮ ಹಣ ವರ್ಗಾವಣೆ ಮಾಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಹಿನ್ನಲೆ ನಿಮ್ಮನ್ನ ಅರೆಸ್ಟ್ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ.

ಬಳಿಕ ದೂರುದಾರ ನನ್ನು ಡಿಜಿಟಲ್ ಅರೆಸ್ಟ್ ಮಾಡಿದಲ್ಲದೆ ಅರೆಸ್ಟ್ ಮಾಡಲು ಸುಪ್ರಿಂ ಕೋರ್ಟ್ ವಾರೆಂಟ್ ಆಗಿದ್ದು, ಬಂಧಿಸಲು ಅರೆಸ್ಟ್ ವಾರೆಂಟ್ ಕೂಡ ಹೊರಡಿಸಿರುವುದಾಗಿ ತಿಳಿಸಿರುತ್ತಾರೆ. ನಂತರ ವಾಟ್ಸ್ ಆ್ಯಫ್ ಮೂಲಕ ವಿಡಿಯೋ ಕಾಲ್ ನಲ್ಲಿ ಇದ್ದು ತನಿಖೆಗೆ ಸಹಕರಿಸಬೇಕಾಗಿ ತಿಳಿಸಿ ಇಲ್ಲವಾದಲ್ಲಿ ಕೂಡಲೇ ಬಂಧಿಸುವುದಾಗಿ ಅಷ್ಟೇ ಅಲ್ಲದೇ ಈ ವಿಚಾರವನ್ನು ಮಗ ಹಾಗೂ ಹಾಗೂ ಹೆಂಡತಿಗೆ ಸಹ ತಿಳಿಸಿದಂತೆ ಹೆದರಿಸಿರುತ್ತಾರೆ. ನಂತರ ಸಂತ್ರಸ್ತ ವ್ಯಕ್ತಿಯ ಎಲ್ಲಾ ವೈಯಕ್ತಿಕ ವಿವರಗಳು ಮತ್ತು ಬ್ಯಾಂಕಿನ ವಿವರಗಳನ್ನು ಪಡೆದುಕೊಂಡಿರುತ್ತಾರೆ. ಈ ರೀತಿಯಾಗಿ ಪಿರ್ಯಾದಿದಾರರಿಗೆ ಆನ್ ಲೈನ್ ಮೂಲಕ ಡಿಜಿಟಲ್ ಅರೆಸ್ಟ್ ಮಾಡಿ ನಿರಂತರವಾಗಿ ವಿವಿಧ ರೀತಿಯಾಗಿ ವಿಚಾರಣೆ ಮಾಡಿ ಬಂಧನದಿಂದ ಪಾರಾಗಬೇಕಾದರೆ ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡಬೇಕು ಎಂದು ತಿಳಿಸಿ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಪರಿಶೀಲನೆ ಮುಗಿಯುವವರೆಗೂ ವರ್ಗಾಯಿಸುವಂತೆ ಹಾಗೂ ಪಾವತಿಸಿದ ಎಲ್ಲಾ ಹಣವನ್ನು ವಾಪಾಸು ನೀಡುವಂತೆ ತಿಳಿಸಿರುತ್ತಾರೆ.


ಇದರಿಂದ ಭಯಗೊಂಡ ದೂರುದಾರ ಆರೋಪಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ದಿನಾಂಕ 09-02-2026 ರಿಂದ 18-02-2026 ರವರೆಗೆ ಒಟ್ಟು ರೂ 41,85,000/- ಹಣವನ್ನು RTGS & NEFT ಮುಖೇನಾ ಹಣ ವರ್ಗಾವಣೆ ಮಾಡಿರುತ್ತಾರೆ.

ಇದೀಗ ಹಣ ಕಳೆದುಕೊಂಡ ಬಳಿಕ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ.

About The Author

Leave a Reply