February 26, 2026
WhatsApp Image 2026-02-26 at 5.10.00 PM

ಕಾವಳಕಟ್ಟೆ : ಕಾವಳ ಮೂಡೂರು ಗ್ರಾಮ ಪಂಚಾಯತ್‌ನ ಸದಸ್ಯೆಯಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಕಾವಳ ಮೂಡೂರು ಗ್ರಾಮದ ಪ್ರಜ್ಞಾವಂತ ಮತದಾರರು, ಪಕ್ಷದ ನಾಯಕರು, ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಗ್ರಾಮದ ಎಲ್ಲಾ ಹಿತೈಷಿ ನಾಗರೀಕರಿಗೆ ಮೊಟ್ಟ ಮೊದಲನೆಯದಾಗಿ ತುಂಬು ಹೃದಯದ ಧನ್ಯವಾದಗಳು.

ಕಾವಳ ಮೂಡೂರು ಒಂದನೇ ವಾರ್ಡಿನ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಜವಾಬ್ದಾರಿಯಿಂದ ಸ್ವೀಕರಿಸಿ, ಸಮಾಜ ಸೇವೆಯಿಂದ ಪ್ರೇರಣೆ ಪಡೆದು ಹಾಗೂ ನಾಯಕರ ಸಲಹೆ ಸೂಚನೆಗಳು ಮತ್ತು ಸತ್ಯ–ನ್ಯಾಯ–ನೀತಿಯನ್ನು ಆದರ್ಶವಾಗಿ ಅಳವಡಿಸಿಕೊಂಡು, ಜನರ ನಿರೀಕ್ಷೆಗಳನ್ನು ಹುಸಿಯಾಗಿಸದೇ ವಾರ್ಡು ಹಾಗೂ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿಸಿದ್ದೇನೆ.

ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಸಾಮಾನ್ಯ ಸಭೆ, ವಾರ್ಡ್ ಸಭೆ,ಗ್ರಾಮ ಸಭೆ ಅಥವಾ ಅಧಿಕೃತ ಸಭೆಯನ್ನೂ ಗೈರಾಗದೆ ಭಾಗವಹಿಸಿ ನಾಗರೀಕರ ಕುಂದುಕೊರತೆಗಳಿಗೆ ಧ್ವನಿಯಾಗಿ ನಿಂತ ಆತ್ಮತೃಪ್ತಿ ನನಗಿದೆ.

ಕಾವಳ ಮೂಡೂರು ಗ್ರಾಮ ಪಂಚಾಯತ್ ಸದಸ್ಯೆಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಕಾವಳ ಮೂಡೂರು ವಾರ್ಡು ಅಭಿವೃದ್ಧಿಗೆ ಕೈಜೋಡಿಸಿದ ಎಲ್ಲರಿಗೂ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ರಸ್ತೆ, ಕುಡಿಯುವ ನೀರು, ಸ್ವಚ್ಛತೆ, ಮೂಲಸೌಕರ್ಯ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ನಡೆದ ಪ್ರತಿಯೊಂದು ಕಾರ್ಯಕ್ಕೂ ನಾಗರೀಕರ ಸಹಕಾರವೇ ನನ್ನ ಶಕ್ತಿ ಆಗಿತ್ತು. ಸಾರ್ವಜನಿಕರ ವಿಶ್ವಾಸ, ಪ್ರೀತಿ ಹಾಗೂ ಪ್ರೋತ್ಸಾಹದಿಂದಲೇ ಈ ಸೇವಾ ಪಯಣ ಸಾಧ್ಯವಾಯಿತು. ಮುಂದಿನ ದಿನಗಳಲ್ಲೂ ಯಾವುದೇ ಹುದ್ದೆಯ ಆಸೆ ಇಲ್ಲದೆ, ಸಾಮಾನ್ಯ ನಾಗರಿಕೆಯಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ವೇಳೆ, ತಮ್ಮ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ಸಂಘ–ಸಂಸ್ಥೆಗಳು, ಹಾಗೂ ಸಮಾಜಸೇವಕರು ವಿಶೇಷ ಧನ್ಯವಾದ ಅರ್ಪಿಸಿರುವ ಅವರು, “ನನ್ನ ಮೇಲೆ ನಂಬಿಕೆ ಇಟ್ಟು ಬೆಂಬಲಿಸಿದ ಪ್ರತಿಯೊಬ್ಬರೂ ನನ್ನ ಜೀವನದ ದೊಡ್ಡ ಶಕ್ತಿಯಾಗಿದ್ದು, ನಿಮ್ಮ ಪ್ರೀತಿ ಹಾಗೂ ಆಶೀರ್ವಾದ ಸದಾ ಇರಲಿ” ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಸೇವಾ ಪಯಣದಲ್ಲಿ ಗೃಹಿಣಿಯಾಗಿ ಕೆಲಸದ ಒತ್ತಡದ ನಡುವೆಯೋ! ಅಥವಾ ಅನುಭವದ ಕೊರತೆಯಿಂದಲೋ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ‌‌ ಎಂದು ತಿಳಿಸಿದರು. ನನಗೆ ನಿರಂತರವಾಗಿ ಬೆಂಬಲ ನೀಡಿ ಸಹಕರಿಸಿದ ಪ್ರಬುದ್ಧ ಮತದಾರರು, ನಾಗರೀಕರು, ಹಿತೈಷಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು–ಸದಸ್ಯರು, ಸಿಬ್ಬಂದಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಪತ್ರಕರ್ತರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಶಾಲಾ–ಕಾಲೇಜು ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಹೃದಯಪೂರ್ವಕ ಧನ್ಯವಾದಗಳು ತಿಳಿಸಿದರು.

About The Author

Leave a Reply