

ಮಲ್ಪೆ: ರೆಸಾರ್ಟ್‌ನಲ್ಲಿ ತಂಗಿದ್ದ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಲ್ಪೆ ಪಡುಕೆರೆ ಎಂಬಲ್ಲಿ ನಡೆದಿದೆ. ಮೃತರನ್ನು ಬೆಂಗಳೂರಿನ ಲೆನ್ಸಿ ಮೇರಿ ಯಾನೆ ಸೂರ್ಯ(36) ಎಂದು ಗುರುತಿಸಲಾಗಿದೆ.
ಫೆ.26ರಂದು ಇತರ 9 ಮಂದಿಯೊಂದಿಗೆ ಬೆಂಗಳೂರಿನಿಂದ ಹೊರಟು ಪಡುಕೆರೆಯ ರೆಸಾರ್ಟ್‌ನಲ್ಲಿ ತಂಗಿದ್ದ ಇವರು ಫೆ.27ರಂದು ಮಲ್ಪೆ ಬೀಚ್‌ನಲ್ಲಿ ಸುತ್ತಾಡಿ ಬಂದು ರಾತ್ರಿ ಮಲಗಿದ್ದರು.

ಫೆ.28ರಂದು ಬೆಳಗ್ಗೆ 8.30ಕ್ಕೆ ಲೆನ್ಸಿ ಮೇರಿಯನ್ನು ಎಬ್ಬಿಸಿದಾಗ ಏಳದೆ ಇದ್ದುದರಿಂದ ಕೂಡಲೇ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ತಿಳಿದುಬಂದಿದೆ. ಲೆನ್ಸಿ ಮೇರಿ ಹೃದಯಾಘಾತದಿಂದಲೋ ಅಥವಾ ಅನಾರೋಗ್ಯದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.






