

ಕಡೂರು ತಾಲ್ಲೂಕು ಬಳ್ಳೇಕೆರೆಯಲ್ಲಿ ಮಾರ್ಚ್, 8 ನೇ ತಾರೀಕು ಶನಿವಾರ ನಡೆದ ಸುಪ್ರಸಿದ್ದ ಶ್ರೀ ಆಂಜನೇಯ ಸ್ವಾಮಿಯವರ ದಿವ್ಯ ರತೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಅಂದು ಬೆಳಗ್ಗೆ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ಸುವರ್ಣ ಕವಚ ಧಾರಣೆ ನಡೆಯಿತು. ನಂತರ ಕಳಶವನ್ನು ರಥಕ್ಕೆ ಏರಿಸುವ ಮುನ್ನ ಕಳಶವನ್ನು ಬೆಳ್ಳಿಯ ಪಲ್ಲಕ್ಕಿಯಲ್ಲಿ ಇರಿಸಿ ಕಲಶೋತ್ಸವ ನಡೆಸಿ ರಥಕ್ಕೆ ಏರಿಸಲಾಯಿ. ನಂತರ ಜಿಲ್ಲೆಯ ಮೂಲೆ ಮೂಲೆಗಳಿಂದ ನೆರೆದಿದ್ದ ಭಕ್ತರು ಜೈ ಶ್ರೀರಾಮ್ ಜೈ ಆಂಜನೇಯ ಎಂಬ ಘೋಷಗಳೊಂದಿಗೆ ರಥ ಎಳೆಯಲಾಯಿತು. ನೆರೆದ ಭಕ್ತರಿಗೆ ಪಾನಕ ವಿತರಣೆ ಮಾಡಿ ಸರ್ವ ಭಕ್ತರಿಗೂ ಅನ್ನಸಂತರ್ಪಣೆ ನಡೆಸಲಾಯಿತು. ಅಂದೇ ರಾತ್ರಿ ಬಾಲಕರಿಂದ ರಾಜ ವಿಕ್ರಮ (ಶನಿಪ್ರಭಾವ) ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.







