March 9, 2026
WhatsApp Image 2026-03-09 at 9.24.19 AM

ಟೆಹ್ರಾನ್: ಅಮೆರಿಕ ಹಾಗೂ ಇಸ್ರೇಲ್‌ ದಾಳಿಯಲ್ಲಿ ಹತ್ಯೆಯಾದ ಇರಾನ್‌ನ ಸರ್ವೋಚ್ಚ ನಾಯಕ ಅಯತೋಲ್ಲಾ ಖಮೇ ಸ್ಥಾನಕ್ಕೆ ಅವರ ಮಗ ಮೊಜ್ತಬಾ ಖಮೇನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಇರಾನ್‌ ಅಧಿಕೃತವಾಗಿ ಘೊಷಿಸಿದೆ.

ಸರ್ವೋಚ್ಚ ನಾಯಕನ ಹುದ್ದೆ ಇಸ್ಲಾಮಿಕ್ ಗಣರಾಜ್ಯದಲ್ಲಿ ನಾಯಕನಿಗೆ ಎಲ್ಲ ವಿಷಯಗಳಲ್ಲೂ ನಿರ್ಧಾರ ಕೈಗೊಳ್ಳುವ ಪರಮಾಧಿಕಾರ ನೀಡುತ್ತದೆ. ಆದರೆ ಇರಾನ್‌ ಆಯ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೋಪಕ್ಕೆ ಗುರಿಯಾಗುವ ಸಾಧ್ಯತೆ ಇದೆ. ನೂತನ ನಾಯಕ ಅಮೆರಿಕದ ಪರ ಅಭಿಪ್ರಾಯ ಹೊಂದಿರಬೇಕು ಎಂದು ಅವರು ಘೋಷಿಸಿದ್ದರು. ಆದರೆ ಅವರ ನಿರೀಕ್ಷೆ ಈಗ ಹುಸಿಯಾಗಿದೆ. ಯಾರೇ ನಾಯಕನಾದರೂ ಸಾಯಲು ತಯಾರಾಗಿರಬೇಕು ಎಂದು ಇಸ್ರೇಲ್‌ ಮತ್ತು ಅಮೆರಿಕ ಈಗಾಗಲೇ ಹೇಳಿವೆ.

ನೂತನ ನಾಯಕನ ಆಯ್ಕೆಗೆ ಇರಾನ್ ನಮ್ಮಿಂದ ಅನುಮೋದನೆ ಪಡೆಯದಿದ್ದರೆ ಅವರು ಹೆಚ್ಚು ಕಾಲ ಉಳಿಯುವುದಿಲ್ಲ. ಇಸ್ರೇಲ್ ಪಡೆ ಇರಾನ್‌ನ ಹೊಸ ಸರ್ವೋಚ್ಚ ನಾಯಕನನ್ನು ಗುರಿಯಾಗಿಸಿಕೊಳ್ಳುವುದಾಗಿ ಬೆದರಿಕೆ ಹಾಕಿತ್ತು.

ಇರಾನ್‌ನ ಆಡಳಿತದ ಸಿದ್ಧಾಂತವು ಆನುವಂಶಿಕ ಉತ್ತರಾಧಿಕಾರದ ತತ್ವವನ್ನು ತಿರಸ್ಕರಿಸಿದೆ. ಆದರೂ ಸೇನೆ ಮತ್ತು ಅವರ ಮೃತ ತಂದೆಯ ಪ್ರಬಲ ಅನುಯಾಯಿಗಳು ಇನ್ನೂ ಕಚೇರಿಯಲ್ಲಿ ಇದ್ದಾರೆ. ಇದೇ ಕಾರಣಕ್ಕೆ ಮೊಜ್ತಬಾ ಅವರ ಆಯ್ಕೆಯಾಗಿದೆ.

ಮೊಜ್ತಬಾ 1969ರಲ್ಲಿ ಇರಾನ್‌ನ ಶಿಯಾ ನಗರವಾದ ಮಶ್ಹಾದ್‌ನಲ್ಲಿ ಜನಿಸಿದರು. ಇರಾನ್‌ನ ಶಿಯಾ ಶಾಸ್ತ್ರದ ಕಲಿಕೆಯ ಕೇಂದ್ರವಾದ ಕೋಮ್‌ನಲ್ಲಿ ಸಂಪ್ರದಾಯವಾದಿಗಳ ಅಡಿಯಲ್ಲಿ ಧಾರ್ಮಿಕ ಶಿಕ್ಷಣವನ್ನು ಪಡೆದರು. ಯುವಕನಾಗಿದ್ದಾಗ ಅವರು ಇರಾನ್-ಇರಾಕ್ ಯುದ್ಧದಲ್ಲಿ ಸೇವೆ ಸಲ್ಲಿಸಿದರು.

ಇಸ್ಲಾಮಿಕ್ ಗಣರಾಜ್ಯದ ಸರ್ಕಾರದಲ್ಲಿ ಯಾವುದೇ ಅಧಿಕೃತ ಹುದ್ದೆಯನ್ನು ಹೊಂದಿರಲಿಲ್ಲ. ಆಗಾಗಾ ರ‍್ಯಾಲಿಗಳಲ್ಲಿ ಕಾಣಿಸಿಕೊಂಡಿದ್ದರೂ, ಸಾರ್ವಜನಿಕವಾಗಿ ಕಡಿಮೆ ಮಾತನಾಡಿದ್ದಾರೆ. ಇಸ್ಲಾಮಿಕ್ ಗಣರಾಜ್ಯದ ಕಟ್ಟುನಿಟ್ಟಾದ ಡ್ರೆಸ್ ಕೋಡ್‌ಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಯುವತಿಯೊಬ್ಬಳ ಕಸ್ಟಡಿ ಸಾವಿನ ನಂತರ ಇರಾನ್‌ನಲ್ಲಿ ಉಂಟಾದ ಅಶಾಂತಿಯ ಸಂದರ್ಭದಲ್ಲಿ ಮೊಜ್ತಬಾ ಅವರನ್ನು ಪ್ರತಿಭಟನಾಕಾರರು ಟೀಕಿಸಿದ್ದರು.

About The Author

Leave a Reply