

ನೀರಿನ ಸಂಪಿಗೆ ಬಿದ್ದು ಎರಡು ವರ್ಷದ ಮಗು ಸಾವನಪ್ಪಿದೆ. ಬೆಂಗಳೂರಿನ ಬ್ಯಾಡರಹಳ್ಳಿಯ ನಿವಾಸದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಅಣ್ಣಯ್ಯ ಮತ್ತು ಋತು ದಂಪತಿಯ ಎರಡುವರೆ ವರ್ಷದ ಮಗ ಸಂಪಿಗೆ ಬಿದ್ದು ಸಾವನಪ್ಪಿದ್ದಾನೆ. ನಿನ್ನೆ ಕಾರು ತೊಳೆಯಲು ಮನೆಯಲ್ಲಿದ್ದ ಸಂಪ್ ತೆಗೆದಿದ್ದ ಅಣ್ಣಯ್ಯ, ಕಾರು ತೊಳೆದು ನಂತರ ಸಂಪ್ ಕ್ಲೋಸ್ ಮಾಡದೇ ತೆರಳಿದ್ದಾರೆ. ಈ ವೇಳೆ ಆಟವಾಡುತ್ತಿದ್ದ ಚಿರಾಗ್ ಸಂಪಗೆ ಬಿದ್ದು ಸಾವನಪ್ಪಿದ್ದಾನೆ.

ಸುರಕ್ಷತೆಗಾಗಿ ಗಮನಿಸಬೇಕಾದ ಅಂಶಗಳು:
- ಸಂಪ್‌ಗಳಿಗೆ ಸುರಕ್ಷಿತ ಮುಚ್ಚಳ: ಮನೆಯಲ್ಲಿ ನೀರಿನ ಸಂಪ್‌ಗಳಿದ್ದರೆ ಅವುಗಳಿಗೆ ಯಾವಾಗಲೂ ಗಟ್ಟಿಯಾದ ಕಬ್ಬಿಣದ ಅಥವಾ ಸಿಮೆಂಟ್ ಮುಚ್ಚಳಗಳನ್ನು ಅಳವಡಿಸಿರಬೇಕು.
- ಲಾಕ್ ವ್ಯವಸ್ಥೆ: ಮುಚ್ಚಳಗಳನ್ನು ಕೇವಲ ಮುಚ್ಚಿಡುವುದು ಸಾಲದು, ಮಕ್ಕಳು ಸುಲಭವಾಗಿ ತೆಗೆಯದಂತೆ ಅದಕ್ಕೆ ಲಾಕ್ (Lock) ಹಾಕುವ ವ್ಯವಸ್ಥೆ ಇರುವುದು ಉತ್ತಮ.
- ನಿರಂತರ ನಿಗಾ: ಸಣ್ಣ ಮಕ್ಕಳಿರುವ ಮನೆಯಲ್ಲಿ ಅವರು ಆಟವಾಡುವಾಗ ದೊಡ್ಡವರ ಕಣ್ಣು ಯಾವಾಗಲೂ ಅವರ ಮೇಲಿರಲಿ. ಆಟದ ಭರದಲ್ಲಿ ಮಕ್ಕಳಿಗೆ ಅಪಾಯದ ಅರಿವಿರುವುದಿಲ್ಲ.
- ನಿರ್ಮಾಣ ಹಂತದ ಕಟ್ಟಡಗಳು: ನಿಮ್ಮ ಮನೆಯ ಸುತ್ತಮುತ್ತ ಕಟ್ಟಡ ಕಾಮಗಾರಿ ನಡೆಯುತ್ತಿದ್ದರೆ, ಅಲ್ಲಿನ ತೆರೆದ ಗುಂಡಿಗಳು ಅಥವಾ ಸಂಪ್‌ಗಳ ಬಗ್ಗೆ ಎಚ್ಚರವಿರಲಿ ಮತ್ತು ಮಾಲೀಕರಿಗೆ ಅವುಗಳನ್ನು ಮುಚ್ಚಲು ಸೂಚಿಸಿ.






