March 14, 2026
WhatsApp Image 2026-03-14 at 9.16.54 AM

ಬೀದರ್ : ದೇಶದ ಹಲವಡೆ ಗ್ಯಾಸ್ ಸಿಲಿಂಡರ್ ಕೊರತೆ ವಿಚಾರವಾಗಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಮೋದಿ ಅವರ ವಿದೇಶಾಂಗ ನೀತಿ ಸಂಪೂರ್ಣವಾಗಿ ವೈಫಲ್ಯವಾಗಿದೆ. ಗ್ಯಾಸ್ ಸಮಸ್ಯೆ ಇಲ್ಲ ಅಂದಮೇಲೆ ಎಸ್ಮಾ ಏಕೆ ಜಾರಿ ಮಾಡಿದರು ಎಂದು ಕಿಡಿಕಾರಿದರು.

ಯುದ್ಧ ಆರಂಭಕ್ಕೂ ಮೋದಿ ಇಸ್ರೇಲ್ ಗೆ ಹೋಗಿದ್ದು ಏಕೆ? ಹೆಸರಿನಲ್ಲಿ ಅಂತಹ ಕೆಲಸ ಏನಿತ್ತು? ಸಮಸ್ಯೆ ನಮ್ಮ ದೇಶದಲ್ಲಿ ಮಾತ್ರ ಏಕೆ ಆಗುತ್ತಿದೆ? ಬೇರೆ ಕಡೆ ಏಕೆ ಆಗುತ್ತಿಲ್ಲ? ಹಾರ್ಮೋಜ್ ಜಲಸಂಧಿಯಲ್ಲಿ ಹಡಗುಗಳ ಓಡಾಟಕ್ಕೆ ಅವಕಾಶ ಸಿಕ್ಕಿದೆ, ಜಲಸಂಧಿಯಲ್ಲಿ ಚೀನಾ ರಷ್ಯಾ ಹಡುಗುಗಳ ಓಡಾಟಕ್ಕೆ ಅವಕಾಶ ಸಿಕ್ಕಿದೆ ನಮ್ಮ ದೇಶಕ್ಕೆ ಅದರ ಕ್ಲಾರಿಟಿ ಇಲ್ಲ ಗ್ಯಾಸ್ ಸಮಸ್ಯೆ ಇಲ್ಲ ಅಂದಮೇಲೆ ಎಸ್ಮಾ ಏಕೆ ಜಾರಿ ಮಾಡಿದರು ಹರ್ದೀಪ ಸಿಂಗ್ ಪುರಿ ಗ್ಯಾಸ್ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ ಏಕೆ? ಎಂದು ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದರು.

About The Author

Leave a Reply