March 16, 2026
WhatsApp Image 2026-03-16 at 10.35.37 AM

ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯ ಸಮೀಪ ಬೋಳುಬೈಲು ಎಂಬಲ್ಲಿ ಕಾರು ಪಲ್ಟಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ಸಂಭವಿಸಿದೆ.

ಪುತ್ತೂರಿನಿಂದ ಸುಳ್ಯದತ್ತ ಹೋಗುತ್ತಿದ್ದ ಕಾರು ಬೋಳುಬೈಲಿನಲಿ ಎದುರಿನಿಂದ ಬಂದ ವಾಹನಕ್ಕೆ ಸೈಡ್‌ ಕೊಡುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಕಾರಿನಲ್ಲಿದ್ದ ಹೇಮಾ ಮತ್ತು ಶ್ರೀಚಂದ್‌ ಎಂಬವರು ಗಾಯಗೊಂಡಿದ್ದಾರೆ. ಅವರ ಪುಟ್ಟ ಮಗು ಮತ್ತು ಕಾರಿನ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿದರು.

About The Author

Leave a Reply