March 19, 2026
WhatsApp Image 2026-03-19 at 9.31.06 AM

ಬೆಂಗಳೂರು : ನಗರದಲ್ಲಿ ಹಫ್ತಾ ನೀಡದಿದ್ದಕ್ಕೆ ಗ್ಯಾರೇಜ್ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಬ್ಯಾಟ್ ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಲ್ಸನ್ ಗಾರ್ಡನ್ ನ ಬಡಾ ಮಖಾನ್ ಬಳಿ ಸಂಭವಿಸಿದೆ.

ಬಡಾ ಮಖಾನ್ ಬಳಿ ಗ್ಯಾರೇಜ್ ನಡೆಸುತ್ತಿದ್ದ ರಶೀದ್ ಪಾಷಾ ಇತ್ತೀಚೆಗಷ್ಟೇ ಅಂಗಡಿಯ ಮೇಲ್ಭಾಗದಲ್ಲಿ ಮೋಲ್ಡ್ ಹಾಕಿಸಿದ್ದನು. ಹೀಗಾಗಿ ಕೆಲ ಗೂಂಡಾಗಳು 50 ಸಾವಿರ ಹಣ ನೀಡುವಂತೆ ರಶೀದ್ ಪಾಷಾಗೆ ಬೆದರಿಸಿದ್ದಾರೆ ಎಂದು ತಿಳಿಯಲಾಗಿದೆ.

ಹಫ್ತಾ ಕೊಡಲ್ಲ ಎಂದು ಆರೋಪಿಗಳಿಗೆ ಭಾನುವಾರ ಬೆಳಗ್ಗೆ ರಶೀದ್ ಹೇಳಿದ್ದನು. ಇದರಿಂದ ಕೆರಳಿದ ಗುಂಪು ರಾತ್ರಿ 8.30ಕ್ಕೆ ಮತ್ತೆ ಬಂದು ಹಫ್ತಾ ಕೊಡುವಂತೆ ಬೆದರಿಸಿದ್ದಾರೆ. ಈ ವೇಳೆ ಇಬ್ಬರು ಮಕ್ಕಳ ಎದುರೇ ರಶೀದ್ ಪಾಷಾ ಮೇಲೆ ಬ್ಯಾಟ್ ಮತ್ತು ದೊಣ್ಣೆಯಿಂದ ಗುಂಪು ಮನಬಂದಂತೆ ಥಳಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ರಶೀದ್ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ಮುಂದುವರೆಸಿದ್ದಾರೆ.

About The Author

Leave a Reply