

ಸುಳ್ಯ: ಮೊಬೈಲ್ ಫೋನ್ ಜೇಬಿನಲ್ಲೇ ಸ್ಫೋಟಿಸಿದ ಪರಿಣಾಮ ಯುವಕ ಗಾಯಗೊಂಡ ಘಟನೆ ಸುಳ್ಯದಲ್ಲಿ ಸಂಭವಿಸಿದೆ.
ಸುಳ್ಯದ ಕಲ್ಮಕಾರಿನ ಗುರುಪ್ರಸಾದ್ ನಿಡುಬೆ ಗಾಯಗೊಂಡವರು.

ಗುರುಪ್ರಸಾದ್ ಒಂದು ವರ್ಷ ಹಿಂದೆ ಖರೀದಿಸಿದ್ದ ಮೊಬೈಲನ್ನು ತನ್ನ ಪ್ಯಾಂಟ್‌ನ ಜೇಬಿನೊಳಗೆ ಹಾಕಿಕೊಂಡಿದ್ದರು. ಈ ವೇಳೆ ಮೊಬೈಲ್ ಸ್ಫೋಟಗೊಂಡಿದೆ. ಪ್ಯಾಂಟ್ ಜೇಬಿನೊಳಗಿದ್ದ ಕಾರಣ ತೊಡೆಯ ಚರ್ಮ ಬೆಂದು ಹೋಗಿದೆ. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.






