March 24, 2026
WhatsApp Image 2026-03-24 at 1.25.09 PM

 ಗೋವಾದ ಕಡಲತೀರದಲ್ಲಿ ಪ್ರವಾಸಿಗರ ಅಶಿಸ್ತಿನ ವರ್ತನೆ ಮುಂದುವರಿದಿದ್ದು, ಗುಜರಾತ್ ನೋಂದಣಿಯ ಟೊಯೋಟಾ ಫಾರ್ಚುನರ್ ಕಾರನ್ನು ಸಮುದ್ರದ ನೀರಿಗೆ ಇಳಿಸಿದ ಘಟನೆ ವಾಗತೋರ್ (Vagator) ಬೀಚ್‌ನಲ್ಲಿ ನಡೆದಿದೆ. ಈ ಸಂಬಂಧ 22 ವರ್ಷದ ಕಾರು ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಡೆದಿದ್ದೇನು?
ವೈರಲ್ ಆಗಿರುವ ವಿಡಿಯೋದ ಪ್ರಕಾರ, ಪ್ರವಾಸಿಗನೊಬ್ಬ ತನ್ನ ಎಸ್‌ಯುವಿ ಕಾರನ್ನು ಅತಿವೇಗವಾಗಿ ಕಡಲತೀರದ ಮರಳಿನ ಮೇಲೆ ಚಲಾಯಿಸಿ ಸಮುದ್ರದ ಅಲೆಗಳ ಹತ್ತಿರ ಕೊಂಡೊಯ್ದಿದ್ದಾನೆ. ಆದರೆ, ಮರಳಿನಲ್ಲಿ ಕಾರಿನ ಚಕ್ರಗಳು ಸಿಲುಕಿಕೊಂಡಿದ್ದರಿಂದ ಕಾರು ಮುಂದೆ ಚಲಿಸಲಾಗದೆ ಅಲ್ಲಿಯೇ ನಿಂತಿದೆ. ಅಷ್ಟರಲ್ಲಿ ಸಮುದ್ರದಲ್ಲಿ ಉಬ್ಬರ (High Tide) ಆರಂಭವಾದ್ದರಿಂದ ನೀರು ಕಾರಿನ ಒಳಗೆ ನುಗ್ಗಿದೆ.

ಜೆಸಿಬಿ ಮೂಲಕ ಕಾರಿನ ರಕ್ಷಣೆ
ನೀರಿನಲ್ಲಿ ಸಿಲುಕಿದ್ದ ಫಾರ್ಚುನರ್ ಕಾರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಅಂತಿಮವಾಗಿ ಜೆಸಿಬಿ ಕ್ರೇನ್ ಬಳಸಿ ಕಾರನ್ನು ದಡಕ್ಕೆ ಎಳೆಯಲಾಯಿತು. ಕಾರಿನ ಬಾಗಿಲು ತೆರೆದಾಗ ಒಳಗಿದ್ದ ನೀರು ಜಲಪಾತದಂತೆ ಹೊರಬರುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿವೆ.

About The Author

Leave a Reply