

ಬಂಟ್ವಾಳ: ಮನೆಯಿಂದ ಕೆಲಸಕ್ಕೆಂದು ತೆರಳಿದ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಪತ್ತೆಯಾದ ಯುವತಿಯನ್ನು ಅರಳ ಗ್ರಾಮದ ಮುಲಾರಪಟ್ನ ನಿವಾಸಿ ಫಾತಿಮತ್ ಇಪ್ರಾ (18) ಎಂದು ಗುರುತಿಸಲಾಗಿದೆ. ಬಿ.ಸಿ ರೋಡ್ ನಲ್ಲಿರುವ ‘ಒನ್ ಸೈಬರ್ ಸೆಂಟರ್’ನಲ್ಲಿ ಕೆಲಸ ಮಾಡುತ್ತಿದ್ದ ಇಪ್ರಾ ಅವರು ಮಾ. 24 ರಂದು ಕೆಲಸಕ್ಕೆಂದು ತೆರಳಿದ್ದು, ಬಳಿಕ ಮನೆಗೆ ಮರಳದೆ ನಾಪತ್ತೆಯಾಗಿದ್ದಾರೆ.

ಈ ಕುರಿತು ಆಕೆಯ ತಾಯಿ ರಝೀಯಾ ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.





