

ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ಶಂಕಿತ ವ್ಯಕ್ತಿಯನ್ನು ಆಂಧ್ರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ: ಅಬ್ದುಲ್ ಸಲಾಂ (36), ಕೌಲ್ ಬಜಾರ್ ನಿವಾಸದ, ನಾರದ ಮಿಲ್ ಪ್ರದೇಶ, ಬಳ್ಳಾರಿ.
ಆಂಧ್ರ ಪ್ರದೇಶ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬಳ್ಳಾರಿಗೆ ಬಂದು ತೀವ್ರ ಕಾರ್ಯಾಚರಣೆ ನಡೆಸಿ ಅಬ್ದುಲ್ ಸಲಾಂ ಅವರನ್ನು ಬಂಧಿಸಿದ್ದಾರೆ. ಬಂಧನದ ನಂತರ ಅವರ ಮನೆಯಲ್ಲಿ ಪಂಚನಾಮೆ ಮಾಡಲಾಗಿದೆ. ಉಗ್ರನ ಮೇಲೆ ಆರೋಪ ಏನು ಏನಿದೆ ಎಂದರೆ. ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರವಾದಿ ಚಟುವಟಿಕೆಗಳನ್ನು ಪ್ರಚಾರ ಮಾಡಿದ ಆರೋಪವಿದೆ. ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿರುವ ಶಂಕೆ ಇದೆ.







