ದರ್ಶನ್‌ ವಿಚಾರದಲ್ಲಿ ಸರ್ಕಾರದ ಮಧ್ಯಸ್ಥಿಕೆ ಇಲ್ಲ-ಗೃಹ ಸಚಿವ ಡಾ.ಜಿ ಪರಮೇಶ್ವರ್

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ನನ್ನು ಇತ್ತೀಚಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕೇಂದ್ರ ಕಾರಾಗ್ರಹಕ್ಕೆ ಸ್ಥಳಾಂತರ ಮಾಡಲಾಗಿದೆ. ಇದೀಗ ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ಅಧಿಕಾರಿಗಳು ಸರ್ಜಿಕಲ್ ಚೇರ್ ನೀಡಿರುವ ಬಗ್ಗೆ ಗೃಹ ಸಚಿವ ಡಾ.ಜಿ.

ಪರಮೇಶ್ವರ್ ಮಾತನಾಡಿದ್ದು, ಅದು ನಮ್ಮ ಕಾರಾಗೃಹ ಇಲಾಖೆಗೆ ಬಿಟ್ಟಿರುವ ವಿಚಾರ. ನಾವ್ಯಾರು ಹಾಗೂ ರಾಜ್ಯ ಸರ್ಕಾರ ಇದರಲ್ಲಿ ಮಧ್ಯಸ್ಥಿಕೆ ವಹಿಸಲ್ಲ ಎಂದು ಹೇಳಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರಾಗೃಹ ಇಲಾಖೆಗೆ ಮಾರ್ಗಸೂಚಿ ಇದೆ. ಅದರ ಆಧಾರದ ಮೇಲೆ ಕೆಲಸ ಮಾಡುತ್ತಾರೆ. ಅವರಿಗೆ ಆ ರೀತಿ ಏನಾದರೂ ಮನವಿ ಇದ್ದರೆ, ಮ್ಯಾನ್ಯೂಯಲ್ ಯಾವ ರೀತಿ ಇರುತ್ತದೆ ಹಾಗೆ ಮಾಡುತ್ತಾರೆ. ನಮಗೆ ಈ ರೀತಿಯ ಸೌಲಭ್ಯ ಬೇಕು ಅಂತಾ ಕೋರ್ಟ್‌ನಲ್ಲಿ ಅರ್ಜಿ ಹಾಕಬೇಕಾಗಿರುತ್ತದೆ ಎಂದರು.

ಆರೋಪಿಗಳು ನಮಗೆ ಈ ರೀತಿ ಆರೋಗ್ಯದ ದೃಷ್ಟಿಯಿಂದ ಸೌಲಭ್ಯ ಬೇಕು ಅಂತಾ ಅರ್ಜಿ ಹಾಕುತ್ತಾರೆ. ಆಗ ಕೋರ್ಟ್ ಏನು ನಿರ್ದೇಶನ ಕೊಡುತ್ತದೆ ಅಧಿಕಾರಿಗಳು ಹಾಗೆ ಮಾಡುತ್ತಾರೆ. ಕಾರಾಗೃಹ ಅಧಿಕಾರಿಗಳು ತೆಗೆದುಕೊಳ್ಳುವ ಕೆಲ ನಿರ್ಧಾರಗಳಿರುತ್ತದೆ. ಅದನ್ನು ಮೀರಿ ಕೆಲ ಸೌಲಭ್ಯಗಳು ಬೇಕು ಅಂದರೆ ಕೋರ್ಟ್‌ಗೆ ಹೋಗಬೇಕು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

Leave a Reply