ಕುಂದಾಪುರ: ಗಂಗೊಳ್ಳಿ ಸ್ಥಳೀಯ ಜಾಮಿಯಾ ಮೊಹಲ್ಲಾ ಪೊಲೀಸ್ ಚೆಕ್ ಪೋಸ್ಟ್ ಎದುರಿನ ನಿವಾಸಿ ಬಷೀರ್ ಅಹ್ಮದ್ ಅವರ ಪುತ್ರ ಮುಬಾಶೀರ್ ಬಷೀರ್ (30) ಇಂದು ಸೌದಿ ಅರೇಬಿಯಾದಲ್ಲಿ ಹೃದಯಾಘಾತ ದಿಂದ ನಿಧನ ಹೊಂದಿದ್ದಾರೆ. ಎರಡು ವರುಷಗಳ ಹಿಂದೆ ಮಹಾರಾಷ್ಟ್ರದ ಪೂನಾ ಮೂಲದ ಯುವತಿಯನ್ನು ವಿವಾಹವಾಗಿದ್ದ ಇವರು, ಪತ್ನಿಯ ಜೊತೆ ಸೌದಿಯಲ್ಲಿ ಉದ್ಯೋಗದಲ್ಲಿದ್ದರು. ಇನ್ನು ಮುಬಾಶೀರ್ ಬಷೀರ್ ಅವರು ಕೆಲ ಸಮಯದ ಹಿಂದೆ ಉದ್ಯೋಗಕ್ಕಾಗಿ ಸೌದಿ ತೆರಳಿದ್ದರು. ಮೃತರು ಪತ್ನಿ, ತಾಯಿ, ತಂದೆ, ಹಾಗೂ ಓರ್ವ ಸಹೋದರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದು, ಅಂತ್ಯಕ್ರಿಯೆ ವಿಧಿವಿಧಾನಗಳ ಬಗ್ಗೆ ಸೌದಿ ದೇಶದ ಕಾನೂನೂ ಕ್ರಮಗಳ ನಂತರವೇ ತಿಳಿದು ಬರಲಿದೆ. ಮಬಾಶೀರ್ ಮೃತ ಸುದ್ದಿ ತಿಳಿಯುತ್ತಿದ್ದಂತೆ ಗಂಗೊಳ್ಳಿಯಲ್ಲಿರುವ ಅವರ ಮನೆಗೆ ಕುಟುಂಬಸ್ಥರು, ಮಿತ್ರರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಕಂಬನಿ ಮಿಡಿಯುತ್ತಿದ್ದಾರೆ ಎಂದು ವರದಿಯಾಗಿದೆ.