ಬಂಟ್ವಾಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾರ್ಶ ಮೈದಾನದ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅದ್ಯಕ್ಷರಾಗಿ ಅಬ್ದುಲ್ ಖಾದರ್ ನಾರ್ಶ ಉಪಾದ್ಯಕ್ಷರಾಗಿ ನೆಬಿಸಾ ಖಾದರ್ ಆಯ್ಕೆ.

ದಿನಾಂಕ 26/11/2024 ರಂದು ತಾಳಿತ್ತನೂಜಿ ನಾರ್ಶ ವಾರ್ಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾರ್ಶ ಮೈದಾನದಲ್ಲಿ ಕೊಳ್ನಾಡು ಇಲ್ಲಿ ನೂತನ SDMC ಸಮಿತಿ ಹಾಗೂ ಅದ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಗ್ರಾ.ಪಂಚಾಯತ್ ಉಪಾಧ್ಯಕ್ಷರಾದ ಕೆ‌.ಎ.ಅಸ್ಮ ಹಸೈನಾರ್ ತಾಳಿತ್ತನೂಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಮುಖ್ಯ ಅತಿಥಿಯಾಗಿ ಆಗಮಿಸಿದ ಕೊಳ್ನಾಡು ಗ್ರಾ.ಪಂಚಾಯತ್ ಸುದೀರ್ಘ ಅವಧಿಯ ಅದ್ಯಕ್ಷರೂ, ಈ ಶಾಲಾಭಿವೃದ್ದಿಗೆ ಅಪಾರ ಕೊಡುಗೆ ನೀಡಿದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಆಗಮಿಸಿ ಶಾಲಾಭಿವೃದ್ದಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ನಂತರ ಮಾತಾಡಿದ ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಸ್ಮ ಹಸೈನಾರ್ ತಾಳಿತ್ತನೂಜಿ ಶಾಲಾಭಿವೃದ್ದಿ ರಚನೆಯ ಬಗ್ಗೆ ಸವಿವರವಾಗಿ ಮಾಹಿತಿ ನೀಡಿ ಈ ಹಿಂದಿನ ಸಮಿತಿ ಕೈಗೊಂಡ ಕಾರ್ಯಕ್ರಮಗಳಿಗೆ ಅಭಿನಂದನೆ ಸಲ್ಲಿಸಿದರು. ಶಾಲಾಭಿವೃದ್ದಿ ಸಮಿತಿಗೆ ಸಾಕಷ್ಟು ಕೊಡುಗೆ ನೀಡಿದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ದ.ಕ.ಜಿ.ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇತಿಹಾಸ ಹೊಂದಿರುವ ಶಾಲೆ,ಇಲ್ಲಿನ ವ್ಯಾಸಂಗ ಮಾಡಿದ ಅದೆಷ್ಟೋ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ,ಅಲ್ಲದೆ ಉದ್ಯಮಿಗಳಾಗಿ,ಸರಕಾರಿ ಶಿಕ್ಷಕರಾಗಿ,ವಕೀಲರಾಗಿ, ವೃತಿಪರ ಕೋರ್ಸುಗಳನ್ನು ಪಡೆದು ತಮ್ಮ ಜೀವನವನ್ನು ಕಂಡುಕೊಂಡಿದ್ದಾರೆ.ಇಲ್ಲಿನ ವಿದ್ಯಾರ್ಥಿಗಳು ಪಠ್ಯ-ಪಠ್ಯೇತರ, ಕ್ರೀಡಾಚಟುವಟಿಗಳಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡವರೂ ಇದ್ದಾರೆ ಎನ್ನುವುದು ಇಲ್ಲಿನ ವಿಶೇಷ.ಪ್ರತಿಬಾ ಕಾರಂಜಿ,ಕ್ರೀಡಾಕೂಟ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು,ಆಚರಣೆಗಳನ್ನು ಇಲ್ಲಿನ ಎಸ್.ಡಿ.ಎಂ.ಸಿ‌ ಯವರು ಬಹಳ ಅಚ್ಚುಕಟ್ಟಾಗಿ ನೆರವೇರಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ.ಇಲ್ಲಿನ ಸುಸಜ್ಜಿತವಾದ ಕಟ್ಟಡಗಳು,ವ್ಯವಸ್ಥೆಗಳು ಖಾಸಗಿ ಶಿಕ್ಷಣ ಸಂಸ್ಥೆಯನ್ನು ಮೀರಿಸುವಂತಿದೆ.ಉತ್ತಮವಾದ ಕ್ರೀಡಾಂಗಣ, ನುರಿತ ಶಿಕ್ಷಕರು,ದಾನಿಗಳ ಸಹಕಾರದಿಂದ ಬಹಳ ಯಶ ಕಂಡಿರುವ ಶಾಲೆ ಎಂದರೆ ತಪ್ಪಾಗಲಾರದು.
ಈ ಹಿಂದೆ ಈ ಶಾಲೆಯ ಸತತ ಎರಡು ಅವಧಿಗೆ SDMC ಅದ್ಯಕ್ಷರಾಗಿ ಸೇವೆಸಲ್ಲಿಸಿದ್ದ ಯಾಕೂಬ್ ನಾರ್ಶ ಅವರು ಗ್ರಾ.ಪಂಚಾಯತ್ ಸಹಕಾರದೊಂದಿಗೆ ಎಲ್ಲವನ್ನೂ ಇಲಾಖೆಯ ಕಡೆ ಮುಖ ಮಾಡದೆ ದಾನಿಗಳಿಂದ,ವೈಯಕ್ತಿಕ ನೆಲೆಯಿಂದ ಇನ್ನಿತರ ಸಂಘಸಂಸ್ಥೆಗಳ ಮೂಲಕ ನಿರಂತರ ಅಭಿವೃದ್ಧಿ ಮಾಡುತ್ತಾ ಅವಿರತಶ್ರಮ ಈ ಶಾಲೆಯ ಅಭಿವೃದ್ಧಿಗೆ ಮೂಲ ಕಾರಣವಾಗಿದೆ,ಅಲ್ಲದೆ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳ ಮಾಡಿದ್ದುದರ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.
ಇದೀಗ ಈ ಶಾಲೆಯ ನೂತನ SDMC ಅದ್ಯಕ್ಷರಾಗಿ ಈ ಶಾಲೆಯ ಹಳೆವಿದ್ಯಾರ್ಥಿ,ಶಾಲಾ ದಿನಗಳಲ್ಲಿ ಜಿಲ್ಲಾ,ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಉದಯೋನ್ಮುಖ ಆಟಗಾರರೂ,ಸಮಾಜಿಕ ಕಾಳಜಿಯಿರುವ, ಶಿಕ್ಷಣದ ಬಗ್ಗೆ ಸದಾ ಮುಂಚೂಣಿಯಲ್ಲಿರುವ,ಶಿಕ್ಷಣ ಪ್ರೇಮಿ ,ವಿವಿಧ ಸಂಘ ಸಂಸ್ಥೆಗಳಲ್ಲಿ ಅದ್ಯಕ್ಷರಾಗಿ,ಪಧಾದಿಕಾರಿಯಾಗಿ,ರಕ್ತದಾನ ಶಿಬಿರ,ಕ್ರೀಡಾಕೂಟ ಸಂಘಟನೆಯಲ್ಲಿ ಅಪಾರ ಅನುಭವ ಹೊಂದಿರುವ ಖಾದರ್ ನಾರ್ಶ ಆಯ್ಕೆಯಾಗಿರುವುದು ಪೋಷಕರಲ್ಲಿ ಸಂತಸ ತಂದಿದೆ.ಈ ಹಿಂದಿನ ಅದ್ಯಕ್ಷರ ಅಭಿವೃದ್ಧಿ ಕಾರ್ಯಗಳು,ಯೋಜನೆಗಳನ್ನು ಮುಂದುವರಿಸಿ ಈ ಶಾಲೆಯ ಪ್ರಗತಿ ಇನ್ನಷ್ಟು ಎತ್ತರಕ್ಕೆ ಬೆಳೆದು ಜಿಲ್ಲೆಯಲ್ಲಿ ಗುರುತಿಸುವಂತಾಗಲಿ ಎಂದು ಪೋಷಕರ ಒಕ್ಕೊರಲ ಅಭಿಪ್ರಾಯವಾಗಿದೆ.
ಈ ಸಂದರ್ಭದಲ್ಲಿ SDMC ನಿಕಟಪೂರ್ವ ಅದ್ಯಕ್ಷರಾದ ಯಾಕೂಬ್ ನಾರ್ಶ,ಮುಖ್ಯೋಪಾಧ್ಯಾಯರಾದ ಶಂಕರ್ ಸಾರ್,ಶಿಕ್ಷಕ ವೃಂದ ಉಪಸ್ಥಿತರಿದ್ದರು.

Leave a Reply