ಕಾಸರಗೋಡು: ಲಾರಿ ಹರಿದು ಇಬ್ಬರು ಮಕ್ಕಳು ಸಹಿತ ಐವರು ಮೃತ್ಯು…!!

ಕಾಸರಗೋಡು: ನಗರದ ಸಮೀಪ ಮರ ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿದ್ದೆ ಮಾಡಿದ್ದವರ ಮೇಲೆ ಹರಿದು ಇಬ್ಬರು ಮಕ್ಕಳು ಸಹಿತ ಐವರು ಸಾವಿಗೀಡಾದ ಘಟನೆ ತೃಶ್ಶೂರಿನ ನಾಟಿಗದಲ್ಲಿ ನಡೆದಿದೆ.
ನಾಟಿಗ ಜಿ.ಕೆ. ಥಿಯೇಟರ್‌ ಪರಿಸರದ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯಲ್ಲಿ ನಡೆದ ದುರಂತದಲ್ಲಿ ಕಾಳಿಯಪ್ಪನ್‌ (50), ನಾಗಮ್ಮ (39), ಬಂಗಾಳಿ (20), ಜೀವನ್‌ (4) ಮತ್ತು ಇನ್ನೊಂದು ಮಗು ಸಾವಿಗೀಡಾಗಿದ್ದಾರೆ.
ಮೃತರು ಗೋವಿಂದಪುರಂ ಚೆಮ್ಮಣಂತೋಡ್‌ ನಿವಾಸಿಗಳು ಎಂದು ತಿಳಿದು ಬಂದಿದೆ.
ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply