ಮಂಗಳೂರು: ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ತಕ್ಷಣ ಎತ್ತಂಗಡಿ ಮಾಡದಿದ್ದಲ್ಲಿ ಸಿಎಂ ಸಿದ್ದರಾಮಯ್ಯ ಡಿ.3ರಂದು ಮಂಗಳೂರಿಗೆ ಆಗಮಿಸುವ ಸಂದರ್ಭ ಡಿವೈಎಫ್ಐ ಕಪ್ಪುಬಾವುಟ ಪ್ರದರ್ಶನ ಮಾಡಲಿದೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಜ್, ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಕಮಿಷನರ್ ಅವರಿಗೆ ಕನಿಷ್ಠ ಪಕ್ಷ ಹೋರಾಟಗಾರರಿಗೆ ಗೌರವ ಕೊಡಲು ಗೊತ್ತಿಲ್ಲ. ಹೋರಾಟಗಳನ್ನು ಈವೆಂಟ್ ತರಹ ನೋಡುತ್ತಿದ್ದಾರೆ. ಹೋರಾಟಗಾರರನ್ನು ರೌಡಿಗಳ ರೀತಿ ಕಾಣುತ್ತಿದ್ದಾರೆ. ಆದ್ದರಿಂದ ಜನರ ಧ್ವನಿಯನ್ನು ಅಡಗಿಸುವಂತಹ ಅನುಪಮ್ ಅಗರ್ವಾಲ್ ಅವರಂತಹ ಅಧಿಕಾರಿಗಳು ಮಂಗಳೂರು ನಗರಕ್ಕೆ ಅಗತ್ಯವಿಲ್ಲ. ಆದ್ದರಿಂದ ಅವರನ್ನು ತಕ್ಷಣ ಇಲ್ಲಿಂದ ಎತ್ತಂಗಡಿ ಮಾಡಬೇಕೆಂದು ನಿರಂತರ ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.