
ಕಡಬ: ಥಾರ್ ಚಾಲಕನೊಬ್ಬ ಗಾಡಿಗೆ ಫುಲ್ ಟ್ಯಾಂಕ್ ಡಿಸೇಲ್ ಹಾಕಿಸಿಕೊಂಡು ಹಣ ಕೊಡದೆ ಪರಾರಿಯಾದ ಘಟನೆ ಕಡಬದ ಹಿಂದೂಸ್ಥಾನ್ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.



ಸುಬ್ರಹ್ಮಣ್ಯ ರಸ್ತೆಯ ಹಳೆ ಸ್ಟೇಷನ್ ಬಳಿ ಇರುವ ಹಿಂದೂಸ್ತಾನ್ ಪೆಟ್ರೋಲ್ ಬಂಕ್ ಗೆ ಥಾರ್ ಗಾಡಿಗೆ ಪುಲ್ ಟ್ಯಾಂಕ್ ಡಿಸೇಲ್ ತುಂಬಿಸಿದ್ದಾನೆ. ಬಳಿಕ ಕ್ಯಾನ್ ನೀಡಿ ಅದಕ್ಕೆ ಡಿಸೇಲ್ ತುಂಬಿಸಲು ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಹೇಳಿದ್ದಾನೆ. ಸಿಬ್ಬಂದಿ ಡಿಸೇಲ್ ತುಂಬಿಸಲು ತೆರಳಿದ ವೇಳೆ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದೆ ನಂಬರಿನ ಇನ್ನೊಂದು ಮಹೇಂದ್ರ ಎಕ್ಸ್ಯುವಿ ಗಾಡಿ ಗಾಡಿ ಸುಳ್ಯ ಪೈಚಾರು ಪೆಟ್ರೋಲ್ ಬಂಕಿನಲ್ಲೂ ಕಳೆದ ಡಿಸೆಂಬರ್ 25ರಂದು ಡಿಸೇಲ್ ಹಾಕಿಸಿ ಹಣ ಕೊಡದೆ ಪರಾರಿಯಾಗಿದ್ದಾನೆ. ಇದೇ ವ್ಯಕ್ತಿ ತುಂಬಾ ಕಡೆ ಡಿಸೇಲ್ ಹಾಕಿಸಿ ಹಣ ಕೊಡದೆ ಮೋಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಂಬರಿನ ಗಾಡಿ ಎಲ್ಲಿಯಾದರು ಸಿಕ್ಕಿದರೆ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕಾಗಿ ವಿನಂತಿ ಮಾಡಲಾಗಿದೆ.