
ಮಣಿಪಾಲ : ಆನ್‌ಲೈನ್ ಹೊಟೇಲ್ ಬುಕ್ಕಿಂಗ್ ಹೆಸರಿನಲ್ಲಿ ಸಾವಿರಾರು ರೂ. ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃದುಲಾ ಜಿ ಶೇಟ್(46) ಎಂಬವರು ಫೆ.12ರಂದು ಹೊಟೇಲ್ ರೂಮ್ ಬುಕ್ಕಿಂಗ್ ಮಾಡಲು ವೆಬ್‌ಸೈಟ್ ನಲ್ಲಿ ಲಾಗಿನ್ ಮಾಡಿದ್ದು, ತುಶಾರ್ ಮೌರ್ಯ ಎಂಬವರು ವಾಟ್ಸಾಪ್ ಮೂಲಕ ಕರೆ ಮಾಡಿ ಕೋಡ್ ಮೂಲಕ ಬುಕ್ಕಿಂಗ್ ಮಾಡಲು ತಿಳಿಸಿದ್ದರು.

ಅದರಂತೆ ಮೃದುಲಾ 20000ರೂ. ಹಣವನ್ನು ಬ್ಯಾಂಕ್ ಖಾತೆಯಿಂದ ಕೋಡ್ ಮೂಲಕ ಪಾವತಿಸಿದ್ದರು. ಅದೇ ರೀತಿ ಮಗನ ಬ್ಯಾಂಕ್ ಖಾತೆ ಮೂಲಕ 6000 ರೂ. ಹಣವನ್ನು ಪಾವತಿ ಮಾಡಿದ್ದರು.

ಈವರೆಗೆ ಹೊಟೇಲ್ ಬುಕ್ಕಿಂಗ್ ಖಾತರಿಯಾಗದ ಕಾರಣ ಇದೊಂದು ಸೈಬರ್ ವಂಚನೆ ಎಂಬುದು ತಿಳಿದು ಬಂದಿದ್ದು, ಸೈಬರ್ ಕಳ್ಳರು ಇವರಿಗೆ ಒಟ್ಟು 26000ರೂ. ಹಣವನ್ನು ಮೋಸ ಮಾಡಿರುವುದಾಗಿ ದೂರಲಾಗಿದೆ.