
ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ನರ್ಸಿಂಗ್ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ನಿಶ್ಕಲಾ (21) ಎಂದು ತಿಳಿದುಬಂದಿದೆ. ಮಂಡ್ಯ ತಾಲೂಕಿನ ಗುನ್ನಾಯಕನಹಳ್ಳಿಯ ಯೋಗಾನಂದ, ಅಶ್ವಿನಿ ದಂಪತಿ ಪುತ್ರಿಯಾಗಿರುವ ನಿಶ್ಕಲಾ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ನರ್ಸಿಂಗ್ ಓದುತ್ತಿದ್ದರು.

ಹಾಸ್ಟೆಲ್ ನಲ್ಲಿ ಸಹಪಾಠಿ ಪಕ್ಕದ ಕೊಠಡಿಗೆ ಹೋಗಿದ್ದ ವೇಳೆಯಲ್ಲಿ ತನ್ನ ರೂಮ್ ನಲ್ಲಿದ್ದ ನಿಶ್ಕಲಾ ಕೊಠಡಿಯ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.ಸ್ಥಳಕ್ಕೆ ಭೇಟಿ ನೀಡಿ ಮಂಡ್ಯ ಪೂರ್ವ ಠಾಣೆ ಪೋಲೀಸರು ಪರಿಶೀಲನೆ ನಡೆಸಿದ್ದಾರೆ.