ಕುಸಿದು ಬಿದ್ದ ಚೈತ್ರ ಕುಂದಾಪುರ: ವಿಕ್ಟೊರಿಯ ಆಸ್ಪತ್ರೆಯ ವೈದ್ಯೆ ಡಾ. ಅಸೀಮಾ ಬಾನು ಹೇಳಿದ್ದನು..?

ಬೆಂಗಳೂರು : ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ ವಂಚನೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವಂತ ಆರೋಪಿ ಚೈತ್ರಾ ಕುಂದಾಪುರ, ಸಿಸಿಬಿ ಕಚೇರಿಯಲ್ಲೇ ಕುಸಿದು ಬಿದ್ದಿದ್ದು, ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಆದರೇ ಇದೀಗ ವಿಕ್ಟೋರಿಯಾ ಆಸ್ಪತ್ರೆ ಡಾ.ಅಸೀಮಾ ಬಾನು ಹೇಳಿಕೆಯೊಂದನ್ನು ನೀಡಿದ್ದು, ಚೈತ್ರಾ ಕುಂದಾಪುರ ಆರೋಗ್ಯ ಸ್ಥಿರವಾಗಿದೆ.ಸದ್ಯಕ್ಕೆ ಫೀಟ್ಸ್ ಆತರ ಲಕ್ಷಣ ಇಲ್ಲ. ಚೈತ್ರಾಗೆ ಚಿಕಿತ್ಸೆ ನೀಡಿದಾಗ ಫೀಟ್ಸ್ ಬಂದಿಲ್ಲ ಎಂದು ಡಾ. ಅಸೀಮಾ ತಿಳಿಸಿದ್ದಾರೆ.

ಸದ್ಯಕ್ಕೆ ಐಸಿಯುನಲ್ಲಿ ಚೈತ್ರಾಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ಡಾ. ಅಸೀಮಾ ಹೇಳಿಕೆ ನೀಡಿದ್ದಾರೆ.ಚೈತ್ರ ಅವರನ್ನು ಆಸ್ಪತ್ರೆಗೆ ಕರೆ ತಂದಾಗ ಫಿಕ್ಸ್ ಇರಲಿಲ್ಲ ಸದ್ಯ ಐಸಿಯುವಿನಲ್ಲಿ ಚೈತ್ರಾಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ಸಿಸಿಬಿ ಕಚೇರಿಯಲ್ಲಿ ನಿನ್ನೆ ಇಡೀ ದಿನ ಚೈತ್ರಾ ಕುಂದಾಪುರ ವಿಚಾರಣೆ ನಡೆಸಲಾಗಿತ್ತು. ಇಂದು ಕೂಡ ವಿಚಾರಣೆ ಮುಂದುವರೆಸೋ ಸಾಧ್ಯತೆ ಇತ್ತು. ಈ ನಡುವೆ ಅನಾರೋಗ್ಯದಿಂದ ಸಿಸಿಬಿ ಕಚೇರಿಯಲ್ಲೇ ಚೈತ್ರಾ ಕುಂದಾಪುರ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಅವರನ್ನು ಸಿಸಿಬಿ ಪೊಲೀಸರು ಈಗ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಇಸಿಜಿ, ಸಿಟಿ ಸ್ಕ್ಯಾನಿಂಗ್, ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆಗೆ ಒಳಪಡಿಸಲಾಗಿದ್ದು ಆಸ್ಪತ್ರೆಗೆ ಬಂದಾಗ ಚೈತ್ರ ಅವರಿಗೆ ಯಾವುದೇ ರೀತಿಯಾದಂತಹ ಫೀಟ್ಸ್ ಲಕ್ಷಣ ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.ಆದರೆ ಇನ್ನೊಂದು ಕಡೆ ಚೈತ್ರ ಸಿಸಿಬಿ ಕಚೇರಿಯಲ್ಲಿ ಬಾತ್ರೂಮಿನಲ್ಲಿ ಸಿಬ್ಬಂದಿಗೆ ಸೋಪ್ ಕೇಳಿದರು.

ಅದೇ ಸೋಪಿನ ನೊರೆ ಇರಬಹುದು ಎಂದು ಅನುಮಾನ ವ್ಯಕ್ತವಾಗುತ್ತಿದೆ. ಆದರೆ ಇದು ಸೋಪಿನ ನೊರೆಯೊ ಅಥವಾ ನಿಜವಾಗಿಯೂ ಫಿಟ್ಸ್ ಬಂದಿದೆಯೊ ಎನ್ನುವುದನ್ನು ಇನ್ನಷ್ಟೇ ವೈದ್ಯರು ಮಾಹಿತಿ ನೀಡಬೇಕಾಗಿದೆ.

Leave a Reply