ಬಂಟ್ವಾಳ : ಹಗಲು ಮನೆ ಕಳವು ಮಾಡುತ್ತಿದ್ದ ಕಳ್ಳರನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಮಂಗಳೂರು ಬೆಂಗ್ರೆ ಭದ್ರಪಳ್ಳಿ ನಿವಾಸಿ ಫರಾಜ್ (27) ಮತ್ತು ಸುರತ್ಕಲ್ ತಾಲೂಕು ಚೊಕ್ಕಬೆಟ್ಟು ಕೃಷ್ಣಾಪುರ 4ನೇ ಬ್ಲಾಕ್ ನ ನಿವಾಸಿಯಾಗಿರುವ ತೌಸಿಫ್ ಅಹಮ್ಮದ್ (34) ಬಂಧಿತ ಆರೋಪಿಗಳು.
ಬಂಧಿತರಿಂದ 12,23,000 ಮೌಲ್ಯದ 223ಗ್ರಾಂ ಚಿನ್ನಾಭರಣ ಮತ್ತು ರೂ 3,000 ಮೌಲ್ಯದ ಬೆಳ್ಳಿ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 3,30,000ಮೌಲ್ಯದ ಮಹೀಂದ್ರ ಕೈಲೋ ಕಾರು ಮತ್ತು ಮೋಟಾರ್ ಸೈಕಲ್ ಸೇರಿದಂತೆ ಒಟ್ಟು ರೂ 15,56,000 ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಶ್ರೀ. ಸಿ.ಬಿ ರಿಷ್ಯಂತ್, ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ದ.ಕ ಜಿಲ್ಲೆರವರ ಹಾಗೂ ಶ್ರೀ ಧರ್ಮಪ್ಪ ಎನ್. ಎಂ.ಕೆ.ಎಸ್.ಪಿ.ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದಕ ಜಿಲ್ಲೆರವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ಪ್ರತಾಪ್ ಸಿಂಗ್ ಹೋರಾಟ್, ಕೆ.ಎಸ್.ಪಿ.ಎಸ್ ಮಾನ್ಯ ಪೊಲೀಸ್ ಉಪಾಧೀಕ್ಷಕರು, ಬಂಟ್ವಾಳ ಉಪವಿಭಾಗರವರ ನಿರ್ದೇಶನದಂತೆ ಪ್ರಕರಣದ ತನಿಖಾಧಿಕಾರಿ ಶ್ರೀ ನಾಗರಾಜ್ ಹೆಚ್ ಈ ಪೊಲೀಸ್ ನಿರೀಕ್ಷಕರು, ಬಂಟ್ವಾಳ ನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣಾ ಕಾನೂನು ಸುವ್ಯವಸ್ಥೆ ವಿಭಾಗ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ರಾಮಕೃಷ್ಣ, ಪೊಲೀಸ್ ಉಪನಿರೀಕ್ಷಕರಾದ ಶ್ರೀ ಕಲೈಮಾರ್ ಮತ್ತು ಅವರ ಜೊತೆ ಎ.ಎಸ್.ಐ. ನಾರಾಯಣ ಹೆಡ್ ಕಾನ್‌ಸ್ಟೇಬಲ್‌ಗಳಾದ ಇರ್ಷಾದ್ ಪಿ. ರಾಜೇಶ್, ಮನೋಹರ, ಕಾನ್ ಸ್ಟೇಬಲ್‌ಗಳಾದ ಉಮೇಶ್ ಹಿರೇಮಟ್ , ರಂಗನಾಥ್. ಆರೋಪಿ ಹಾಗೂ ಸೊತ್ತು ಪತ್ತೆ ಕಾರ್ಯಾಚರಣೆ ನಡೆಸಿರುವುದಾಗಿದೆ, ಹಾಗೂ ಜಿಲ್ಲಾ ಬೆರಳನ್ನು ಘಟಕದ ಸಚಿನ್ ಮತ್ತು ಉದಯ ಹಾಗೂ ಜಿಲ್ಲಾ ಗಣಕಯಂತ್ರ ಕೇಂದ್ರದ ದಿವಾಕರ ಮತ್ತು ಸಂಪತ್ ರವರು ಆರೋಪಿ ಪತ್ತೆ ಬಗ್ಗೆ ಸಹಕರಿಸಿರುವುದಾಗಿದೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.