ಅಕ್ರಮ ಚಿನ್ನ ಸಾಗಾಟ:ಇಬ್ಬರು ಸ್ಮಗ್ಲರ್‌ ಗಳಿಂದ 2 ಕೋಟಿ ರೂ. ಮೌಲ್ಯದ ಚಿನ್ನ ವಶ..!

ತಿರುವನಂತಪುರಂ: ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಸ್ಮಗ್ಲರ್‌ ಗಳು ಹೊಸ ಹೊಸ ತಂತ್ರ ಅನುಸರಿಸುತ್ತಿದ್ದಾರೆ. ಕಸ್ಟಮ್ಸ್‌ ಅಧಿಕಾರಿಗಳು ನೇರ ಕಾರ್ಯಾಚರಣೆಗೆ ಮುಂದಾದರೆ ಸ್ಮಗ್ಲರ್‌ ಗಳು ರಂಗೋಲಿ ಕೆಳಗೆ ತೂರುತ್ತಾರೆ. ಚಿನ್ನದ ದ್ರಾವಣದಲ್ಲಿ ಬಟ್ಟೆಗಳನ್ನು ಅದ್ದಿ ಅಕ್ರಮವಾಗಿ ಸಾಗಿಸುವ ಹೊಸ ತಂತ್ರವನ್ನು ಸ್ಮಗ್ಲರ್‌ ಗಳು ಅನುಸರಿಸಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಇಬ್ಬರು ಸ್ಮಗ್ಲರ್‌ ಗಳಿಂದ 2 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.

ಈ ಪೈಕಿ ಒಂದು ಪ್ರಕರಣದಲ್ಲಿ 10 ಲುಂಗಿಗಳನ್ನು ಚಿನ್ನದ ದ್ರಾವಣದಲ್ಲಿ ಮುಳುಗಿಸಿ ಬಳಿಕ ಅದನ್ನು ಒಣಗಿಸಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.  ದುಬಾಯಿನಿಂದ ಬಂದಿದ್ದ ಈ ಪ್ರಯಾಣಿಕನ ಬಳಿ ಇದ್ದ ಚಿನ್ನದ ದ್ರಾವಣದಲ್ಲಿ ಅದ್ದಿದ ಲುಂಗಿಗಳ ತೂಕ  4.3 ಕೆ.ಜಿ. ಇತ್ತು. ಚಿನ್ನವನ್ನು ವಸ್ತ್ರದಿಂದ ಸಪೂರ್ಣವಾಗಿ ಬೇರ್ಪಡಿಸಿದ ಬಳಿಕವೇ ಚಿನ್ನದ ನೈಜ ತೂಕ ಗೊತ್ತಾಗಲಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

10 ಲುಂಗಿಗಳಿಗೆ ಕನಿಷ್ಟ 1 ಕೆ.ಜಿ. ಚಿನ್ನ ಬಳಕೆ ಮಾಡಿರ ಬಹುದೆಂದು ಅಂದಾಜಿಸಲಅಗಿದೆ. ಇನ್ನೊಂದು ಪ್ರಕರಣದಲ್ಲಿ ಪ್ರಯಾಣಿಕನ ಹ್ಯಾಂಡ್‌ ಬ್ಯಾಗ್‌ ನಲ್ಲಿದ್ದ ಸ್ಟೀಲ್‌ ಫ್ಲಾಸ್ಕ್‌ ನಲ್ಲಿ ಅಡಗಿಸಿಟ್ಟಿದ್ದ 2,201.6 ಗ್ರಾ ಚಿನ್ನ ಪತ್ತೆಯಾಗಿದೆ. ಫ್ಲಾಸ್ಕ್‌ ನಿಂದ ಚಿನ್ನವನ್ನು ಪ್ರತ್ಯೇಕಿಸಿದಾಗ 1959.85 ಗ್ರಾ ಚಿನ್ನ ಸಿಕ್ಕಿದೆ. ಇದರ ಮಾರುಕಟ್ಟೆ ಮೌಲ್ಯ 1,19,35,487 ರೂಪಾಯಿ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಕೈತಪರಬಿಲ್‌ ಸುಹೈಬ್‌ ಎಮುರೇಟ್ಸ್‌ ವಿಮಾನದಲ್ಲಿ ದುಬಾಯಿಯಿಂದ ಆಗಮಿಸಿದ್ದು, ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳ ಮಾಹಿತಿಯಂತೆ ಕಸ್ಟಮ್ಸ್‌ ಅಧಿಕಾರಿಗಳು ದಾಳಿ ನಡೆಸಿದರು.  ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Reply