ಬಂಟ್ವಾಳ: ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರ ಬಳಿ ನಿವಾಸಿ, ಬಿ.ಎಸ್.ಎನ್.ಎಲ್.ನಿವೃತ್ತ ನೌಕರ ಜೋಸೆಫ್ ಡಿಸೋಜ(60) ಅವರು ಡಿ. 11ರಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ನಾವೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಸೇವ್ರಿನ್ ಡಿಸೋಜ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಬಿ.ಎಸ್.ಎನ್.ಎಲ್.ನಲ್ಲಿ ಹಲವು ದಶಕಗಳ ಕಾಲ ಕರ್ತವ್ಯ ನಿರ್ವಹಿಸಿ ಆಫೀಸ್ ಸೂಪರಿಂಟೆಂಡೆಂಟ್(ಒಎಸ್) ಹುದ್ದೆಯಿಂದ ನಿವೃತ್ತರಾಗಿದ್ದರು. ಅಲ್ಲಿಪಾದೆ ಚರ್ಚ್ ಪಾಲನಾ ಮಂಡಳಿ ಸೇರಿದಂತೆ ಪ್ರತಿ ಕಾರ್ಯಕ್ರಮಗಳಲ್ಲೂ ಸಕ್ರೀಯರಾಗಿದ್ದು, ಸರಳ ಸ್ವಭಾವ, ಪರೋಪಕಾರಿ ಮನೋಭಾವದ ಮೂಲಕ ಎಲ್ಲರ ಪ್ರೀತಿ- ವಿಶ್ವಾಸವನ್ನು ಗಳಿಸಿಕೊಂಡಿದ್ದರು. ಅವರ ನಿಧನಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೃತರ ಅಂತಿಮ ವಿಧಿ ವಿಧಾನಗಳು ಡಿ. 12ರಂದು ನಡೆಯಲಿದ್ದು, ಬೆಳಗ್ಗೆ 9.30ಕ್ಕೆ ಮನೆಯಿಂದ ಹೊರಟು 10 ಗಂಟೆಗೆ ಅಲ್ಲಿಪಾದೆ ಚರ್ಚ್ ನಲ್ಲಿ ಪ್ರಾರ್ಥನೆಯೊಂದಿಗೆ ನಡೆಯಲಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿದೆ.