ಮಾಂಸ ಪ್ರಿಯರಿಗೆ ಬಿಗ್ ಶಾಕ್ : ಹೊಸ ವರ್ಷಕ್ಕೆ ಮೊಟ್ಟೆ, ಚಿಕನ್ ದರ ಏರಿಕೆ

ಮಾಂಸ ಪ್ರಿಯರಿಗೆ ಹೊಸ ವರ್ಷಕ್ಕೆ ಬಿಗ್ ಶಾಕ್ ಎದುರಾಗಲಿದ್ದು , ಮೊಟ್ಟೆ, ಚಿಕನ್ ದರ ಏರಿಕೆ ಯಾಗಲಿದೆ.

ಹೌದು, ಮೊಟ್ಟೆಯ ದರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸದ್ಯ ಒಂದು ಮೊಟ್ಟೆಗೆ 7.50 ದರ ಇದೆ. ಕ್ರಿಸ್ ಮಸ್ ಹಾಗೂ ಹೊಸ ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೇಕ್ ಗೆ ಭಾರಿ ಬೇಡಿಕೆ ಬರುವ ಹಿನ್ನೆಲೆ ಮೊಟ್ಟೆ ದರ ಏರಿಕೆಯಾಗುತ್ತಿದೆ.

ಕೇಕ್ ಹಾಗೂ ಬೇಕರಿ ಉತ್ಪನ್ನಗಳು ಹೆಚ್ಚು ಟೇಸ್ಟ್ ಬರಬೇಕೆಂದರೆ ಅದರಲ್ಲಿ ಮೊಟ್ಟೆಯ ಪ್ರಾಮುಖ್ಯತೆ ಹೆಚ್ಚು.

ಇನ್ನೂ ಕ್ರಿಸ್ ಮಸ್ ಹಾಗೂ ಹೊಸ ವರ್ಷಕ್ಕೆ ಮೊಟ್ಟೆಯ ಜೊತೆ ಚಿಕನ್ ದರ ಕೂಡ ಹೆಚ್ಚಳವಾಗಲಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಬೆಲೆ ಹೆಚ್ಚಳವಾಗಿದೆ. ಸ್ಕಿನ್ ಕೆಸ್ ಬಾಯ್ಲರ್ ಚಿಕನ್ ಸದ್ಯ 220 ರಿಂದ 240 ಕ್ಕೆ ಮಾರಾಟವಾಗ್ತಿದೆ. ವಿತ್ ಸ್ಕಿನ್ ಚಿಕನ್ 200 ರಿಂದ 220 ಕ್ಕೆ ಏರಿಕೆಯಾಗಿದೆ. ತರಕಾರಿಯಲ್ಲಿ ನೋಡುವುದಾದರೆ ಬೆಳ್ಳುಳ್ಳಿ ದರ ಜಂಪ್ ಆಗಿದ್ದರೆ, ಈರುಳ್ಳಿ ಬೆಲೆ ಇಳಿಕೆಯಾಗಿದೆ. 60 ರೂ ಇದ್ದ ಈರುಳ್ಳಿ 35 ರಿಂದ 40 ಕ್ಕೆ ಇಳಿದಿದೆ

Leave a Reply