ಸುರತ್ಕಲ್ : ಜೂಜಾಟ ನಾಲ್ವರ ಬಂಧನ

ಸುರತ್ಕಲ್: ಜೂಜಾಟವಾಡುತ್ತಿದ್ದ ಆರೋಪದಲ್ಲಿ ನಾಲ್ಕು ಮಂದಿಯನ್ನು ಸುರತ್ಕಲ್ ಪೊಲೀಸರು ತಡಂಬೈಲ್‌ ಸಮೀಪದ ನಿರ್ಮಿತಿ ಕೇಂದ್ರದ ಬಳಿ ಬಂಧಿಸಿದ್ದಾರೆ. ಆರೋಪಿಗಳನ್ನು ಸ್ಥಳೀಯರಾದ ನಿಂಗಪ್ಪ ಪಾಟೀಲ್, ಶರಣಪ್ಪ ಗುಳಬಾಳ, ಸುನೀಲ್, ಸಕ್ರಪ್ಪ ಎಂದು ಗುರುತಿಸಲಾಗಿದೆ ಬಂಧಿತರಿಂದ ಆಟಕ್ಕೆ ಬಳಸಿದ್ದ 4 ಮೊಬೈಲ್ ಫೋನ್‌ಗಳು, 1980 ರೂ. ನಗದು ಮತ್ತು ಆಟಕ್ಕೆ ಬಳಸಿದ್ದ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ವಹಿಸಲಾಗಿದೆ ಎಂದು ಸುರತ್ಕಲ್ ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply