ಯುಗಾದಿ, ರಂಜಾನ್ ಹಬ್ಬದ ಹೊತ್ತಲ್ಲೇ ಗ್ರಾಹಕರಿಗೆ ಶಾಕ್ : ಚಿಕನ್-ಮಟನ್ ಬೆಲೆಯಲ್ಲಿ ಭಾರೀ ಏರಿಕೆ

ಯುಗಾದಿ, ರಂಜಾನ್ ಹಬ್ಬಕ್ಕೆ ಗ್ರಾಹಕರಿಗೆ ಬಿಗ್ ಶಾಕ್, ಕೋಳಿ, ಕುರಿ ಮಾಂಸದ ಬೆಲೆಯಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ವರ್ಷ ಮಂಗಳವಾರ ಯುಗಾದಿ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಬುಧವಾರ ವರ್ಷ ತೊಡಕು ಬಂದಿದೆ. ವರ್ಷ ತೊಡಕಿನ ಮರುದಿನವೇ ಮುಸ್ಲಿಮರ ಹಬ್ಬ ರಂಜಾನ್‌ ಹಬ್ಬ ಇದೆ.

ಹೀಗಾಗಿ ಮಾಂಸದ ಬೆಲೆಯಲ್ಲಿ ಭಾರೀ ಹೆಚ್ಚಳವಾಗುವ ಸಾಧ್ಯತೆ ಇದೆ.

ಕುರಿ, ಮೇಕೆ ಮಾಂಸವನ್ನು ಕೆ.ಜಿ.ಗೆ 600 ರೂ. ನಿಂದ 800 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಹಬ್ಬದ ದಿನ ಬೇಡಿಕೆ ಹೆಚ್ಚಾಗುವುದರಿಂದ ಪ್ರತಿ ಕೆ.ಜಿ ದರವು 50 ರೂ. ನಿಂದ 100 ರೂ.ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ, ಇನ್ನು ಚಿಕನ್ ಬೆಲೆಯಲ್ಲಿ ಏರಿಕೆಯಾಗಿದ್ದು, ಪ್ರತಿ ಕೆಜಿ ಜೀವಂತ ಕೋಳಿಗೆ 170 ರೂ.ವರೆಗೆ ದರ ಇದ್ದದ್ದು 220 ರೂ.ಗೆ ತಲುಪಿದೆ. ಕೋಳಿ ಮಾಂಸ ಕೆಜಿಗೆ 260 ರೂ. ನಿಂದ 330 ರೂ.ವರೆಗೆ ಏರಿಕೆಯಾಗಿದೆ. ಈ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

Leave a Reply