
ಕೋಯಿಕ್ಕೋಡ್ : ಕೋಯಿಕ್ಕೋಡ್ ಮತ್ತು ನಿಯಂತ್ರಿತ ವಲಯಗಳಲ್ಲಿ ನಿಪಾಹ್ ಸೋಂಕು ಹರಡುವುದನ್ನು ತಡೆಯಲು, ಕೇರಳ ಸರ್ಕಾರವು ಸೆಪ್ಟೆಂಬರ್ 13 ರಂದು ವಲಯಗಳೊಳಗಿನ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲು ಆದೇಶಿಸಿತು.



ವರದಿಯ ಪ್ರಕಾರ, ಕೇರಳದ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಅವರು ಗುರುತಿಸಲಾದ ಏಳು ಗ್ರಾಮ ಪ್ರದೇಶಗಳಲ್ಲಿನ ಎಲ್ಲಾ ಶಾಲೆಗಳನ್ನು ಮುಚ್ಚಲು ಆದೇಶ ಹೊರಡಿಸಿದ್ದಾರೆ.
ನಿಫಾ ಸೋಂಕು ದೃಢಪಟ್ಟ ಸ್ಥಳಗಳಲ್ಲಿ, ಸಾಮಾಜಿಕ ಕೂಟಗಳು ಮತ್ತು ಕಾರ್ಯಕ್ರಮಗಳ ಮೇಲೆ ನಿರ್ಬಂಧಗಳನ್ನ ವಿಧಿಸಬಹುದು ಎಂದು ಸಚಿವರು ಹೇಳಿದರು.
ಏತನ್ಮಧ್ಯೆ, ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ರಾಜ್ಯಕ್ಕೆ ನಿಫಾ ವೈರಸ್’ನ ಅಧಿಕೃತ ದೃಢೀಕರಣವನ್ನ ಒದಗಿಸಿದೆ.